ರಾಮನಗರ: ಚನ್ನಪಟ್ಟಣ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು.ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿವೈ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ರಾಮನಗರದ ತಹಶೀಲ್ದಾರ್ ಕಛೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಸಿಪಿವೈ ಚುನಾವಣಾಧಿಕಾರಿ ಬಿನೋಯ್ ಗೆ ಎರಡು ಸೆಟ್ ನಾಮಪತ್ರ ಸಲ್ಲಿಸಿದರು. ಸಿಪಿವೈ ಜೊತೆ ಸಿಎಂ, ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ ಶಾಸಕರಾದ ಹೆಚ್ ಸಿ ಬಾಲಕೃಷ್ಣ ಕದಲೂರು ಉದಯ್, ಜಿಲ್ಲಾಧ್ಯಕ್ಷ ಗಂಗಾಧರ್ ಸಾಥ್ ನೀಡಿದರು.
ಕಾಂಗ್ರೆಸ್ನಿಂದ ಶಕ್ತಿ ಪ್ರದರ್ಶನ
ನಾಮಪತ್ರ ಸಲ್ಲಿಕೆ ಹಿನ್ನಲೆ ಇಂದು ಕಾಂಗ್ರೆಸ್ನಿಂದ ಚನ್ನಪಟ್ಟಣದಲ್ಲಿ ಬೃಹತ್ ರೋಡ್ಶೋ ಹಮ್ಮುಕೊಳ್ಳಲಾಗಿದ್ದು. ಸಿ.ಪಿ.ಯೋಗೇಶ್ವರ್ ಜೊತೆ ಸಿಎಂ.ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಹೆಚ್ ಸಿ ಬಾಲಕೃಷ್ಣ, ಕದಲೂರು ಉದಯ್, ಜಿಲ್ಲಾಧ್ಯಕ್ಷ ಗಂಗಾಧರ್ ಸಿ.ಪಿ ಯೋಗೇಶ್ವರ್ಗೆ ಸಾಥ್ ನೀಡಿದರು.
ಚನ್ನಪಟ್ಟಣ ಬಸವನಗುಡಿ ಸರ್ಕಲ್ ನಿಂದ ಆರಂಭವಾಗಿರುವ ರೋಡ್ ಶೋ ತಾಲ್ಲೂಕು ಕಚೇರಿಯವರೆಗು ಮುಂದುವರೆಯಿತು. ಇಲ್ಲಿ ಮಾತನಾಡಿದ ಸಿ.ಪಿ ಯೋಗೇಶ್ವರ್ ತಾಲೂಕಿನ ಸಾವಿರಾರು ಜನರು ನಾಮಪತ್ರಕ್ಕೆ ಬರ್ತಾರೆ. ನಾನು ಮೂಲತಃ ಕಾಂಗ್ರೆಸ್ ನಿಂದ ಸಾರ್ವಜನಿಕ ಜೀವನ ಪ್ರಾರಂಭಿಸಿದೆ. ಬಳಿಕ ಸಾಕಷ್ಟು ಬಾರಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇನೆ. ಜನ ಪಕ್ಷಕ್ಕಿಂತ ವ್ಯಕ್ತಿ ನೋಡಿ ಮತ ನೀಡ್ತಾರೆ. ಕಳೆದ ಉಪ ಚುನಾವಣೆಯಲ್ಲೂ ಇದನ್ನ ನೋಡಿದ್ದೇವೆ. ನನಗೆ ಅನ್ಯಾಯವಾಗಿದೆ, ಅದು ತಾಲೂಕಿನ ಜನಕ್ಕೆ ಗೊತ್ತಿದೆ. ಒಂದೆರಡು ದಿನ ವಿಳಂಬ ಆಗಿದ್ರೆ ನನ್ನ ಸ್ಥಿತಿ ಅತಂತ್ರ ಆಗ್ತಿತ್ತು. ನ್ಯಾಯಯುತವಾಗಿ ನನಗೆ ಮೈತ್ರಿ ಟಿಕೆಟ್ ಸಿಗಬೇಕಿತ್ತು. ಅದನ್ನ ಕೊಡದೇ ಅನ್ಯಾಯ ಮಾಡಿದ್ರು. ಹಾಗಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೈ ಹಿಡಿದಿದ್ದಾರೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸಿಪಿವೈ ಕ್ಷೇತ್ರಕ್ಕೆ ಸಾಕಷ್ಟು ಕೆಲಸಗಳನ್ನ ಮಾಡುವ ಆಸೆ ಇದೆ. ನನ್ನದೇ ಆದ ಒಂದಷ್ಟು ಅಭಿವೃದ್ಧಿ ಆಲೋಚನೆ ಇದೆ. ಕೆರೆಗಳನ್ನ ತುಂಬಿಸಿ ರೈತರ ಬದುಕು ಹಸನುಗೊಳಿಸಬೇಕು.
ಆ ನಿಟ್ಟಿನಲ್ಲಿ ಕೆಲಸ ಮಾಡ್ತೇನೆ. ಎಂದು ಹೇಳಿದರು. ತಮ್ಮ ಪೂರ್ವ ರಾಜಕೀಯ ಜೀವನವನ್ನು ನೆನಪಿಸಿಕೊಂಡ ಸಿಪಿವೈ , ನಾನು ಡಿಕೆಶಿ ರಾಜಕೀಯ ವಿಚಾರಕ್ಕೆ ಹೋರಾಟ ಮಾಡಿದ್ವಿ. ಆದ್ರೆ ನಾವಿಬ್ಬರು ಒಂದೇ ಜಿಲ್ಲೆಯವರು, ಅಭಿವೃದ್ಧಿ ವಿಚಾರಕ್ಕೆ ಒಟ್ಟಾಗಿ ಕೆಲಸ ಮಾಡ್ತೇವೆ. ಇಲ್ಲಿ ಹೊರಗಡೆಯವರ ಕಾಟ ಹೆಚ್ಚಾಗಿತ್ತು.ಈಗ ಅದನ್ನ ಸರಿಪಡಿಸಿಕೊಂಡು ಕೆಲಸ ಮಾಡ್ತೇವೆ ಎಂದು ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದರು.