Monday, December 23, 2024

ದಲಿತರ ಮೇಲೆ ದೌರ್ಜನ್ಯ : 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಕೊಪ್ಪಳ : ಜಿಲ್ಲೆಯ ಮರಕುಂಬಿ ಗ್ರಾಮದ ದಲಿತರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣ ಇಂದು 102 ಆರೋಪಿಗಳ ವಿರುದ್ಧ ಶಿಕ್ಷೆ ಪ್ರಕಟಣೆಯಾಗಿದ್ದು ಕೊಪ್ಪಳ‌ ಜಿಲ್ಲಾ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ. ಇಂದು ಬೆಳಿಗ್ಗೆ ಕೊಪ್ಪಳ ಕಾರಗೃಹದಿಂದ ನಾಲ್ಕು ಪೊಲೀಸ್ ವಾಹನ ಮತ್ತು ಒಂದು KSRTC ಬಸ್​ನಲ್ಲಿ ಆರೋಪಿಗಳನ್ನು ಜೈಲಾಧಿಕಾರಿಗಳು ಕರೆತಂದು ನ್ಯಾಯಾಲಯದ ಮುಂದೆ ಹಾಜರು ಪಡಿಸದರು.

9 ವರ್ಷಗಳ ನಂತರ 102 ತಪ್ಪಿತಸ್ಥರ ವಿರುದ್ದ ಆರೋಪ ಸಾಬೀತಾಗಿದ್ದು.  ಇಷ್ಟು ದಿನ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿತ್ತು.ಇವರ ವಿರುದ್ಧ ಇಂದು ಸಂಜೆ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು.  98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಸಾವಿರ ದಂಡ ವಿಧಿಸಲಾಗಿದೆ. ಉಳಿದ 3 ಆರೋಪಿಗಳಿಗೆ 5ವರ್ಷ ಜೈಲು ಶಿಕ್ಷೆ ಮತ್ತು ತಲಾ 2 ಸಾವಿರ ದಂಡ ವಿಧಿಸಲಾಗಿದೆ.

2014- 2015 ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ ಸರ್ವಣಿಯರು ದಲಿತರ ಹೋಟೆಲ್, ಕೇರಿಯನ್ನು ದ್ವಂಸಗೊಳಿಸಿದ್ದರು. ಅದರ ಜೊತೆಗೆ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರಿಂದ ಇದು ದೊಡ್ಡ ಪ್ರಕರಣವಾಗಿ ರಾಜ್ಯದಲ್ಲಿಯೇ ಸದ್ದು ಮಾಡಿದ್ದ ದಲಿತ ದೌರ್ಜನ್ಯ ಪ್ರಕರಣವಾಗಿತ್ತು. ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ 117 ಜನರ ವಿರುದ್ದ ದೂರು ದಾಖಲಾಗಿತ್ತು. ಈ 117 ಜನರಲ್ಲಿ ಕೆಲ ಆರೋಪಿಗಳು ಸಾವನ್ನಪ್ಪಿದ್ದು ಇಂದು 101 ಜನರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಸಂಜೆ 6 ಗಂಟೆಗೆ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಿದ್ದು ಬರೊಬ್ಬರಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು. ಉಳಿದ 3 ಅಪರಾಧಿಗಳಿಗೆ ತಲಾ 5 ವರ್ಷಗಳ ಶಿಕ್ಷೆಯನ್ನು ವಿಧಿಸಿ ಕೊಪ್ಪಳ ಜಿಲ್ಲಾ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ.

RELATED ARTICLES

Related Articles

TRENDING ARTICLES