ಬೆಂಗಳೂರು : ಬೆಂಗಳೂರಿನಲ್ಲಿ ಕನ್ನಡವನ್ನು ಜೀವಂತವಾಗಿರಿಸಿದ ಕೀರ್ತಿ ಕನ್ನಡ ಹೋರಾಟಗಾರರಿಗಿಂತ ಹೆಚ್ಚು ಆಟೋ ಡ್ರೈವರ್ಗಳಿಗೆ ಸಲ್ಲಬೇಕು ಎಂದರೆ ತಪ್ಪಾಗುವುದಿಲ್ಲಾ ಎಂದು ಎನಿಸುತ್ತದೆ. ಏಕೆಂದರೆ ಇಲ್ಲೊಬ್ಬ ಆಟೋ ಚಾಲಕ ತನ್ನ ಆಟೋ ಹತ್ತುವ ಅನ್ಯ ಭಾಷಿಕರಿಗೆ ವಿಭಿನ್ನವಾಗಿ ಕನ್ನಡ ಕಲಿಸಲು ಮುಂದಾಗಿದ್ದಾನೆ. ಆತನ ಈ ವಿಭಿನ್ನ ಯೋಜನೆ ಏನೆಂದು ತಿಳಿಯಲು ಈ ಕೆಳಗಿನ ವರದಿಯನ್ನು ನೋಡೋಣ.
ತನ್ನ ಆಟೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕನ್ನಡ ಕಲಿಸಲು ಆಟೋಚಾಲಕನ ವಿಶೇಷ ಪ್ರಯತ್ನ ಮಾಡಿದ್ದು. ಆಟೋದಲ್ಲೆ ಕನ್ನಡದ ಪಾಠ ಕಲಿಸಲು ಆಟೋ ಕನ್ನಡಿಗ ಮುಂದಾಗಿದ್ದಾನೆ. ಆಟೋ ಕನ್ನಡಿಗನ ಈ ಹೊಸ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು.ಅನ್ಯಭಾಷಿಗರ ಹಾವಳಿ ಹೆಚ್ಚಾದ ಕಾರಣ.ಇದಕ್ಕೆ ಬ್ರೇಕ್ ಹಾಕಲು ಹೊಸ ಪ್ರಯೋಗ ನಡೆಸುತ್ತಿದ್ದೇನೆ ಎಂದು ಆಟೋ ಚಾಲಕ ಅಜ್ಜು ಸುಲ್ತಾನ್ ಹೇಳುತ್ತಾನೆ.
ತನ್ನ ಆಟೋದಲ್ಲಿ ‘ಲರ್ನ್ ಕನ್ನಡ ವಿತ್ ಆಟೋ ಕನ್ನಡಿಗ’ಎಂಬ ಬೋರ್ಡ್ ಹಾಕಿದ್ದು ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕನ್ನಡ ಕಲಿಸಲು ತನ್ನ ಆಟೋದಲ್ಲಿ ಬೋರ್ಡ್ ಅಂಟಿಸಿರುವ ಅಜ್ಜು,ಅನ್ಯ ಭಾಷಿಗರಿಗೆ ಬೋರ್ಡ್ ಮೂಲಕವೇ ಕನ್ನಡದ ಪಾಠ ಮಾಡುತ್ತಿದ್ದಾನೆ. ಪ್ಯಾಸೆಂಜರ್ ಕುಳಿತುಕೊಳ್ಳುವ ಜಾಗದಲ್ಲಿ ಕನ್ನಡ ಪದಗಳ ಬೋರ್ಡ್ ಅಂಟಿಸಿರುವ ಚಾಲಕ, ಈ ಬೋರ್ಡ್ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಪದಗಳನ್ನು ಸೇರಿಸಿದ್ದಾನೆ. ಇದರಿಂದಾಗಿ ಕನ್ನಡ ಬರದವರು ಸುಲಭವಾಗಿ ಕನ್ನಡದಲ್ಲಿ ವ್ಯವಹರಿಸಲು ಸಾಧ್ಯವಾಗಿದೆ ಎಂಬ ಮಾಹಿತಿ ದೊರೆತಿದೆ. ಆಟೋ ಕನ್ನಡಿಗನ ಹೊಸ ಪ್ರಯೋಗಕ್ಕೆ ಕರುನಾಡಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.