Wednesday, January 22, 2025

ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರಿ ತಮ್ಮ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ : ಆರ್.ಅಶೋಕ್

ಬೆಂಗಳೂರು : ಯೋಗೇಶ್ವರ್ ಕಾಂಗ್ರೆಸ ಸೇರ್ಪಡೆ ಹಿನ್ನಲೆ ಸುದ್ದಿಗೋಷ್ಟಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್.ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಅವರಿಗೆ ಬಿಜೆಪಿಯಲ್ಲಿ ಏನಾಗಿರಲಿಲ್ಲ. ಅವರು ಬಿಜೆಪಿಯ ಸಿದ್ಧಾಂತದಿಂದ ಬಂದವರಲ್ಲ. ಅವರು ಸೈಕಲ್ ಪಾರ್ಟಿ, ಪಕ್ಷೇತರ, ಬೇರೆ ಬೇರೆ ಪಕ್ಷದಿಂದ ಬಂದವರು
ನಾವೂ ಕೂಡಾ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಗಂಭೀರವಾಗಿ ಮಾಡಿದ್ದೆವು, ಹೈಕಮಾಂಡ್ ಜತೆ ಚರ್ಚೆ ಮಾಡಿದ್ದೆವು. ಆದರೆ ಅವರು ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಆರ್. ಅಶೋಕ್ ಸಿ.ಪಿ.ಯೋಗೇಶ್ವರ್ ಐದು ಕಡೆಯಿಂದ ಬಿ ಫಾರಂ ತಂದಿದ್ರು ಅಂತ ಸುದ್ದಿ ಇದೆ. ಅವರು ನಮ್ಮ ಮಾತು ಕೇಳದೇ ಕಾಂಗ್ರೆಸ್ ಸೇರಿದ್ದಾರೆ. ನಾವೆಲ್ಲರೂ ಇದು ಜೆಡಿಎಸ್‌ ಟಿಕೆಟ್, ಹೆಚ್ಡಿಕೆ ಅವರೇ ತೀರ್ಮಾನ ಮಾಡಬೇಕು ಅಂತನೇ ಹೇಳಿಕೊಂಡು ಬಂದಿದ್ದೆವು. ಹೆಚ್ಡಿಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್‌ ಚಿನ್ಹೆಯಡಿ ಸ್ಪರ್ಧೆಗೆ ಆಫರ್ ಕೊಟ್ರು. ಕಾಂಗ್ರೆಸ್ ಬದಲು ಜೆಡಿಎಸ್ ನಿಂದಲೇ ನಿಲ್ಲಬಹುದಿತ್ತು ಇದರಿಂದ ಎನ್‌ಡಿಎಗೆ ಅನುಕೂಲ ಆಗ್ತಿತ್ತು ಎಂದು ಹೇಳಿದರು.

ಸಿಪಿವೈ ಈಗ ಪಕ್ಷ ದ್ರೋಹ ಮಾಡಿ ಹೋಗಿದ್ದಾರೆ. ಯಾವ ಚಿನ್ಹೆ ಆದರೇನು ಇಲ್ಲಿದ್ದಿದ್ರೆ ಎನ್‌ಡಿಎಯಿಂದನೇ ಸ್ಪರ್ಧೆ ಮಾಡ್ತಿದ್ರು.ಸಿಪಿವೈ ನಮ್ಮಲ್ಲಿ ಸೀನಿಯರ್ ಲೀಡರ್ ಆಗಿದ್ರು,ಈಗ ಕಾಂಗ್ರೆಸ್ ನಲ್ಲಿ ಲಾಸ್ಟ್ ಬೆಂಚ್ ಆಗ್ತಾರೆ
ಅವರನ್ನು ಅಲ್ಲಿ ಬೆಳೆಯಲು ಡಿಕೆಶಿ ಬಿಡಲ್ಲ ಅವರು ಕಾಂಗ್ರೆಸ್ ಸೇರಿ ತಮ್ಮ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES