Tuesday, October 22, 2024

By election 2024: ಸಂಡೂರಿನಲ್ಲಿಯು ಬಿಜೆಪಿಗೆ ಬಂಡಾಯದ ಬಿಸಿ

ಬಳ್ಳಾರಿ :  ಬಿಜೆಪಿಯಲ್ಲಿ ಬೈಎಲೆಕ್ಷನ್ ಅಭ್ಯರ್ಥಿ ಘೋಷಣೆ ಬಳಿಕ ಅಸಮಧಾನ ಸ್ಫೋಟಗೊಂಡಿದ್ದು.
ಸಂಡೂರು ಕ್ಷೇತ್ರದಲ್ಲಿ ಬಂಗಾರು ಹನುಮಂತುಗೆ ಟಿಕೆಟ್ ನೀಡಿದ್ದರಿಂದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಕೆ ಎಸ್ ದಿವಾಕರ್ ಅತೃಪ್ರಿ ಹೊಂದಿದ್ದಾರೆ ಎಂದು ಮಾಹಿತಿ ದೊರೆತಿದೆ.

ತಮಗೆ ಅನ್ಯಾಯ ಆಗಿದೆ, ಬೆಂಬಲಿಗರ ಸಭೆ ಬಳಿಕ ಮುಂದಿನ ನಿರ್ಧಾರ ಮಾಡಲಾಗುವುದು ಎಂದಿರುವ ದಿವಾಕರ್. ಈ ಮೂಲಕ ಬಂಡಾಯದ ಸುಳಿವು ಕೊಟ್ಟಿದ್ದಾರೆ.  ರೆಡ್ಡಿ-ರಾಮುಲು ಆಪ್ತರಾಗಿರುವ ದಿವಾಕರ್ ಇತ್ತ ತಮ್ಮ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿರುವ ದಿವಾಕರ್ ಜೊತೆ್ಗೆ ಶ್ರೀರಾಮುಲು ಕೂಡ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಕೆ ಎಸ್ ದಿವಾಕರ್ ಪರ ಟಿಕೆಟ್ ಕೊಡಿಸಲಿ ರಾಮುಲು ಲಾಬಿ ನಡೆಸಿದ್ದರು ಆದರೆ ಜನಾರ್ದನ ರೆಡ್ಡಿ ಡಿಮ್ಯಾಂಡ್‌ನಂತೆ ಬಂಗಾರು ಹನುಮಂತುಗೆ ಹೈಕಮಾಂಡ್‌ಗೆ ಮನ್ನಣೆ ಹಾಕಿದೆ. ಹೀಗಾಗಿ ರಾಮುಲು ಬೇಸರಗೊಂಡು ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ರಾಮುಲು ಮನವೊಲಿಸಿ ಒಟ್ಟಿಗೆ ಸುದ್ದಿಗೋಷ್ಟಿ ನಡೆಸಿ ಒಗ್ಗಟ್ಟಿನ ಮಂತ್ರ ಸಾರಿರುವ ರೆಡ್ಡಿ ಚುನಾವಣೆಗೆ ತೊಡೆ ತಟ್ಟಿದ್ದಾರೆ. ಆದರೂ ಸಂಡೂರು ಬಿಜೆಪಿಯಲ್ಲಿ ಎಲ್ಲವೂ ಸರಿಯಲ್ಲ, ಎಂಬುದು ಮೇಲ್ನೋಟಕ್ಕೆ ಕಾಣುತಿದೆ.

ಇತ್ತ ಶಿಗ್ಗಾಂವಿಯಲ್ಲೂ ಆಕಾಂಕ್ಷಿಗಳಾಗಿದ್ದ ಬೊಮ್ಮಾಯಿಯವರ ಒಂದಿಬ್ಬರು ಆಪ್ತರು ಬೇಸರ ವ್ಯಕ್ತಪಡಿಸಿದ್ದು.
ಶಿಗ್ಗಾಂವಿಗೆ ತೆರಳಿ ಮನವೊಲಿಕೆ ಮಾಡಲು ಬೊಮ್ಮಾಯಿ ಮುಂದಾಗಿದ್ದಾರೆ .ಸಂಡೂರಿಗೆ ಹೋಲಿಸಿದರೆ ಶಿಗ್ಗಾಂವಿ ಬೇಗುದಿ ಬಹಳ ಸಣ್ಣದು ಎಂದು ಪರಿಗಣಿಸಿರುವ ರಾಜ್ಯ ಬಿಜೆಪಿ ಬೊಮ್ಮಾಯಿಯವರ ಮಟ್ಟದಲ್ಲೇ ಸರಿಯಾಗಲಿದೆ ಎನ್ನಲಾಗಿದೆ.

ಈ ಬೆನ್ನಲ್ಲೇ ಹೈಕಮಾಂಡ್ ಮಧ್ಯಪ್ರವೇಶಿಸಿ, ಅತೃಪ್ತರಿಗೆ ವಾರ್ನಿಂಗ್ ನೀಡಿದ್ದಾರೆ ಮತ್ತು ಅಸಮಧಾನಕ್ಕೆ ತೆರೆ ಎಳೆಯಲು ಹೈಕಮಾಂಡ್ ಖಡಕ್ ಆಗಿ ತಾಕೀತು ಮಾಡಿದೆ. ಸಂಡೂರು ಹಾಗೂ ಶಿಗ್ಗಾಂವಿಯಲ್ಲಿ ಅಭ್ಯರ್ಥಿ ಗೆಲುವಿಗೆ ಎಲ್ಲರು ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು.ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸದಿದ್ದರೆ ಮುಲಾಜೇ ಇಲ್ಲದೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES