Thursday, November 21, 2024

ಸಾಮಾನ್ಯ ಜನರ ಬಲಿಕೊಟ್ಟು ಐಶಾರಾಮಿ ಜೀವನ ನಡೆಸುತ್ತಿದ್ದ ಹಮಾಸ್ ಮುಖ್ಯಸ್ಥನ ಬಂಕರ್ ಹೇಗಿದೆ ಗೊತ್ತಾ?

ಇಸ್ರೇಲ್ : ಭಯೋತ್ಪಾದಕ ಸಂಘಟನೆ ಹೆಜ್ಬುಲ್ಲಾ ಮುಖ್ಯಸ್ಥ ಹಸ್ಸನ್ ನಸ್ರಲ್ಲಾ ಅಡಗಿದ್ದ ರಹಸ್ಯ ಬಂಕರ್ ನೊಳಗೆ 500 ಮಿಲಿಯನ್ ಡಾಲರ್ ನಗದು ಮತ್ತು ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿರುವುದಾಗಿ ಇಸ್ರೇ ಲ್ ತಿಳಿಸಿದೆ. ಬೈರುತ್ ನ ಆಸ್ಪತ್ರೆಯ ಕೆಳಭಾಗದಲ್ಲಿ ರಹಸ್ಯವಾಗಿ ನಿರ್ಮಿಸಲಾಗಿದ್ದ ಬೃಹತ್ ಬಂಕರ್ ನ್ನು ಹಸ್ಸನ್ ನಸ್ರಲ್ಲಾ ಅಡಗಿಕೊಳ್ಳಲು ಬಳಸುತ್ತಿದ್ದ.

ಬಂಕರ್​ನ  ಆಕಾರದ ಬಗ್ಗೆ ಗ್ರಾಫಿಕ್ ಫೋಟೊ ಮತ್ತು ವಿಡಿಯೊವನ್ನು ಇಸ್ರೇಲ್ ಡಿಫೆನ್ಸ್ ಫೋರ್ಸ್‌ನ ವಕ್ತಾರ ಅಡ್ಮಿರಲ್ ಡೇನಿಯಲ್ ಹಗಾರಿ ಬಹಿರಂಗಪಡಿಸಿದ್ದಾರೆ. ಈ ಬಂಕರ್ ಅನ್ನು ಉದ್ದೇಶಪೂರ್ವಕವಾಗಿ ಆಸ್ಪತ್ರೆಯ ಕೆಳಭಾಗದಲ್ಲಿ ನಿರ್ಮಿಸಲಾಗಿದ್ದು, ಅಲ್ಲಿ ಅರ್ಧ ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ನಗದು, ಚಿನ್ನಾಭರಣವನ್ನು ಕೂಡಿಡಲಾಗಿದೆ. ಬಹುಶಃ ಈ ಹಣ ಲೆಬನಾನ್ ನಿವಾಸಿಗಳ ಪುನರ್ವಸತಿಗೆ ಬಳಸಬೇಕಾಗಿತ್ತು. ಆದರೆಅದನ್ನು ಹೆಜ್ಬುಲ್ಲಾ ಉಗ್ರರ ಪುನರ್ವಸತಿಗೆ ಬಳಸಲಾಗುತ್ತಿತ್ತು ಎಂದು ಹಗಾರಿ ವಿವರಿಸಿದ್ದಾರೆ.

ಹೆಜ್ಬುಲ್ಲಾ ವಿರುದ್ಧ ಲೆಬನಾನ್ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿರುವ ಹಗಾರಿ, ಅವರಿಗೆ ನೀಡಿರುವ ಸೌಲಭ್ಯವನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ. ಹೆಜ್ಬುಲ್ಲಾ ಮತ್ತು ಹಮಾಸ್ ವಿರುದ್ಧ ಆರೋಪಿಸಿರುವ ಇಸ್ರೇಲ್ ರಕ್ಷಣಾ ಪಡೆ, ಆಸ್ಪತ್ರೆ, ಶಾಲೆ ಸೇರಿದಂತೆ ಸೂಕ್ಷ್ಮ ಪ್ರದೇಶಗಳನ್ನು ತಮ್ಮ
ಶಸ್ತ್ರಾಸ್ತ್ರ ಅಡಗಿಸಿಡಲು ಮತ್ತು ಉಗ್ರರಿಗೆ ರಕ್ಷಣೆ ಒದಗಿಸಲು ಬಳಸಿಕೊಂಡಿರುವುದಾಗಿ ತಿಳಿಸಿದೆ.

ಲೆಬನಾನ್ ಜನರು ಮತ್ತು ಇರಾನ್ ಆಡಳಿತ ಎರಡೂ ಕೂಡಾ ಹೆಜ್ಬುಲ್ಲಾದ ಪ್ರಮುಖ ಆದಾಯದ ಮೂಲಗಳಾಗಿವೆ ಎಂದು ಹಗಾರಿ ಹೇಳಿದ್ದು, ಲೆಬನಾನ್, ಸಿರಿಯಾ, ಯೆಮೆನ್, ಟರ್ಕಿಯಲ್ಲಿ ಹೆಜ್ಬುಲ್ಲಾ ಫ್ಯಾಕ್ಟರಿಗಳನ್ನು ನಡೆಸುತ್ತಿದ್ದು, ಇದರ ಮೂಲಕ ಆದಾಯ ಗಳಿಸಿ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡಲು ಹಣವನ್ನು ಬಳಸುತ್ತಿರುವುದಾಗಿ ಹಗಾರಿ ತಿಳಿಸಿದ್ದಾರೆ. ಈ ಬಂಕರ್ ಎರಡು ಇತರ ಕಟ್ಟಡದ ಜೊತೆಗೆ ಸಂಪರ್ಕ ಹೊಂದಿದ್ದು, ಅದನ್ನು ಪ್ರವೇಶಿಸಲು ಮತ್ತು ಹೊರಹೋಗಲು ಬಳಸಲಾಗುತ್ತಿತ್ತು. ಬಂಕರ್ ಶಸ್ತ್ರಸಜ್ಜಿತ ಬೆಡ್​ಗಳು, ಕೋಣೆಗಳನ್ನು ಹೊಂದಿದ್ದು, ಯುದ್ಧ ಕಾರ್ಯಾಚರಣೆಗೆ ಕಮಾಂಡ್ ನೀಡುವ ಸೆಂಟರ್ ಗಳು ಕೂಡಾ ಇದ್ದಿರುವುದಾಗಿ ಇಸ್ರೇಲ್ ತಿಳಿಸಿದೆ.

RELATED ARTICLES

Related Articles

TRENDING ARTICLES