Tuesday, October 22, 2024

ಮತ್ತೆ ಮುಳುಗಿದ ಕೇಂದ್ರಿಯ ವಿಹಾರ ಅಪಾರ್ಟಮೆಂಟ್: ಮಳೆಗೆ ತತ್ತರಿಸಿದ ರಾಜಧಾನಿ ಜನ

ಬೆಂಗಳೂರು:  ನೆನ್ನೆ ರಾತ್ರಿ ಸುರಿದ ಭಾರೀ ಮಳೆಗೆ ರಾಜ್ಯ ರಾಜಧಾನಿ ಬೆಂಗಳೂರು ಮತ್ತೇ ಮುಳುಗಿದ್ದು. ಬೆಂಗಳೂರಿನ ಪ್ರವಾಹದ ಕೇಂದ್ರಬಿಂದುವಾಗಿರುವ ಕೇಂದ್ರಿಯ ವಿಹಾರ್ ಅಪಾರ್ಟ್ಮೆಂಟ್ ಮತ್ತೇ ಮುಳುಗಿದೆ.  ಮತ್ತೆ ಎಂದಿನಂತೆ  ಬಿಬಿಎಂಪಿ ಅಧಿಕಾರಿಗಳು ಸ್ಥಳವೀಕ್ಷಣೆ ಮಾಡಲು ಪ್ರವಾಸ ಕೈಗೊಂಡಿದ್ದಾರೆ.

ಸುಮಾರು 2500 ಜನರಿರುವ ಕೇಂದ್ರಿಯ ವಿಹಾರ ಅಪಾರ್ಟಮೆಂಟ್  ಮುಂದೆ ಅಕ್ಷರಶಃ ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿದ್ದು. ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು NDRF ಮತ್ತು SDRF ಟೀಂ ಎಂಟ್ರಿ ಕೊಟ್ಟು ಬೋಟಿಂಗ್ ಮೂಲಕ ಕಾರ್ಯಾಚರಣೆ ಶುರು ಮಾಡಿದೆ. ವಿಶೇ಼ಷ ಟೀಂಗಳಾಗಿ NDRF ಕಾರ್ಯಾಚರಣೆ ಶುರುಮಾಡಿದ್ದು.35 NDRF ಸಿಬ್ಬಂದಿಯಿಂದ ಬೋಟಿಂಗ್ ಮೂಲಕ ಕಾರ್ಯಾಚರಣೆ ಮಾಡಲಾಗುತ್ತಿದೆ.ಸ್ಥಳಕ್ಕೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಭೇಟಿ ನೀಡಿ ಬೋಟ್ ನಲ್ಲಿ ಹೋಗಿ ಪರಿಶೀಲನೆ ಮಾಡಿದ್ದಾರೆ.

ಕೇಂದ್ರಿಯ ಅಪಾರ್ಟಮೆಂಟ್​ನಲ್ಲಿ ಮತ್ತೇ ಮತ್ತೇ ಇದೆ ಸಮಸ್ಯೆ ಉಂಟಾಗುತ್ತಿದ್ದು ಇದಕ್ಕೆ ಶಾಶ್ವಸ ಪರಿಹಾರಕ್ಕಾಗಿ ನಿವಾಸಿಗಳು ಆಗ್ರಹಿಸುತ್ತಿದ್ದಾರೆ. ಪ್ರತಿ ಬಾರಿ ಮಳೆಯಾದಗಲು ಜನರು ಇದೇ ಸಮಸ್ಯೆಗೆ ಒಳಗಾಗುತ್ತಿದ್ದು. ಜನರು ಮನೆಯಿಂದ ಹೊರಬರಲಾಗದೆ ನರಳುತ್ತಿದ್ದಾರೆ.

 

 

RELATED ARTICLES

Related Articles

TRENDING ARTICLES