Wednesday, January 22, 2025

ಬೆನ್ನು ನೋವಿನಿಂದ ನರಳುತ್ತಿರುವ ದರ್ಶನ್: ಆಸ್ಪತ್ರೆಗೆ ರವಾನೆ

ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಆರೋಗ್ಯ ಹದಗೆಟ್ಟ ಹಿನ್ನಲೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಜೈಲು  ಸಿಬ್ಬಂದಿಗಳು ಪೂರ್ವ ಸಿದ್ದತೆ ನಡೆಸುತ್ತಿದ್ದಾರೆ. ಇಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಿಸಲಾಗುತ್ತದೆ ಎಂದು ಮಾಹಿತಿ ದೊರೆತಿದೆ.

ವಿಪರೀತ ಬೆನ್ನು ನೋವಿನಿಂದ ನರಳುತ್ತಿರುವ ಡೆವಿಲ್ ಇಂದು ವಿಮ್ಸ್ ನಲ್ಲಿ ಎಂಆರ್ ಐ ಸ್ಕ್ಯಾನ್ ಮಾಡಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ. ದರ್ಶನ್ ಕರೆದುಕೊಂಡು ಹೋಗಲಿರುವ ಜೈಲ್ ಸಿಬ್ಬಂದಿ ಸಿದ್ದತೆ ನಡೆಸುತ್ತಿದ್ದು ಎಂಆರ್​ಐ ಸ್ಕ್ಯಾನ್ ಮಾಡಿದ ನಂತರ ನೋವಿಗೆ ಸರಿಯಾದ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದು ಸ್ಕ್ಯಾನಿಂಗ್ ಮಾಡಿಸಲು ತಯಾರಿ ಮಾಡಲಾಗುತ್ತಿದೆ.

ಸಂಜೆ ಸಮಯದಲ್ಲಿ ಹೋರ ರೋಗಿಗಳ ಪ್ರಮಾಣದ ಸಂಖ್ಯೆ ಬಾರಿ ಕಡಿಮೆ ಇರುತ್ತೆ ಈಗಾಗಲೇ ಜೈಲ್ ಸಿಬ್ಬಂದಿಯಿಂದ ವಿಮ್ಸ್ ಆಸ್ಪತ್ರೆಗೆ ಮಾಹಿತಿ ತಿಳಿಸಿದ್ದು.ಪೋಲೀಸ್ ಬೆಂಗಾವಲು ವಾಹನದ ಜೊತೆ ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಲು ಸಿದ್ದತೆ ನಡೆಸಲಾಗಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಸುಮಾರು ಎರಡು ಕಿ.ಮೀ ದೂರವಿರುವ ಆಸ್ಪತ್ರೆಯಿದ್ದು ಸಂಜೆ ಆರು ಗಂಟೆಯ ಒಳಗಾಗಿ ಓಪಿಡಿಗೆ ಕೊಲೆ ಆರೋಪಿಯನ್ನು ಕರೆದುಕೊಂಡು ಹೋಗಲು ಜೈಲಾಧಿಕಾರಿಗಳು ಸಿದ್ದತೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES