ಕೊಪ್ಪಳ : ಸ್ಥಳೀಯ ಜನರಲ್ಲ ಆತಂಕ ಮೂಡಿಸಿದ್ದವು ಆದರೆ ಅರಣ್ಯ ಇಲಾಖೆ ಇವುಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಪವರ್ ಟಿವಿಯ ವರದಿಯಿಂದ ಹೆಚ್ಚತ್ತ ಅರಣ್ಯ ಇಲಾಖೆ ಚಿರತೆಯನ್ನು ಬಂಧಿಸಿದ್ದಾರೆ.
ಅತ್ತಿವಟ್ಟಿ ಪ್ರದೇಶದಲ್ಲಿ ಸೋಮವಾರ ಸಂಜೆ ಬೋನ್ ಇರಿಸಿದ ಅಧಿಕಾರಿಗಳು. ಬೋನ್ ಇಟ್ಟ ಒಂದೆ ತಾಸಿನಲ್ಲಿ ಚಿರತೆ ಸೆರೆ ಸಿಕ್ಕಿದೆ. ಆಹಾರ ಹುಡಿಕೊಂಡು ಬೋನಿಗೆ ಬಿದ್ದ ಚಿರತೆಯನ್ನು ಸೆರೆಯಿಡಿಯುವಲ್ಲಿ ಅಧಿಕಾರಿಗಳು ಸಫಲರಾಗಿದ್ದಾರ.
ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಆನೆಗೊಂದಿ, ದುರ್ಗಾಬೆಟ್ಟ, ಅಂಜನಾದ್ರಿ, ಸಾಣಾಪುರ, ಬಸಾಪುರ, ಬಂಡಿಹರ್ಲಾಪುರ ಭಾಗದ ಅತ್ತಿವಟ್ಟಿ ಬೆಟ್ಟಗಳಲ್ಲಿ ಚಿರತೆಗಳು ವಾಸ ಹೆಚ್ಚಾಗಿದ್ದು. ಸಂತಾನೋತ್ಪತ್ತಿಗಾಗಿ ಚಿರತೆಗಳು ವಲಸೆ ಬರುತ್ತಿವೆ.
ಕಳೆದ ಶನಿವಾರ ಬಂಡಿಹರ್ಲಾಪುರ ಭಾಗದ ಅತ್ತಿವಟ್ಟಿ ಬೆಟ್ಟಗಳ ಪ್ರದೇಶದಲ್ಲಿ ಸುಮಾರು ನಾಲ್ಕು ಚಿರತೆಗಳು ಪ್ರತ್ಯಕ್ಷವಾಗಿದ್ದವು. ಸುತ್ತಮುತ್ತಲಿನ ರೈತರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಆತಂಕ ವ್ಯಕ್ತ ಪಡಿಸಿದ್ದರು.
ಈ ಕುರಿತು ಪವರ್ ಟಿವಿ ಸುದ್ದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಮುನಿರಾಬಾದ್ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಸಂಜೆ ಅತ್ತಿವಟ್ಟಿ ಬೆಟ್ಟದ ಸಮೀಪ ಚಿರತೆ ಸೆರೆ ಹಿಡಿದ್ದಿದ್ದಾರೆ.
ಕಳೆದ 15 ದಿನಗಳಿಂದ ಎರಡು ದೊಡ್ಡ ಚಿರತೆ ಹಾಗೂ ಎರಡು ಮರಿಚಿರತೆಗಳು ಕಾಣಿಸಿಕೊಂಡಿದ್ದವು. ಇವುಗಳನ್ನು ಸೆರೆಯಿಡಿಯಲು ಅರಣ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.