Friday, January 24, 2025

ಕೆರೆಯಲ್ಲಿ ನಾಪತ್ತೆಯಾಗಿದ್ದ ಮಕ್ಕಳಿಬ್ಬರ ಶವ ಪತ್ತೆ: ಸ್ಥಳದಲ್ಲಿ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ

ಬೆಂಗಳೂರು: ನೆನ್ನೆ ಸಂಜೆ ಕೆರೆಯಲ್ಲಿ ನೀರು ತರಲು ಹೋಗಿ ಕಾಣೆಯಾಗಿದ್ದ ಮಕ್ಕಳಿಬ್ಬರ ಶವ ಪತ್ತೆಯಾಗಿದೆ ಎಂದು  ಮಾಹಿತಿ ದೊರೆತಿದ್ದು. ಕೆಂಗೇರಿ ಬಳಿಯಲ್ಲಿರುವ ಗೊರುರು ಕೆರೆಯಿಂದ ಮಕ್ಕಳ ಮೃತದೇಹವನ್ನು ಹೊರತೆಗೆಯಲಾಗಿದೆ.

ಇಂದು ಬೆಳಿಗ್ಗೆ 8 ಗಂಟೆಯಿಂದ ಶೋಧಕಾರ್ಯ ಆರಂಭಿಸಿದ್ದ ರಕ್ಷಣಾ ಸಿಬ್ದಂದಿ ಬೆಳಿಗ್ಗೆ 11 ಗಂಟೆ ಸಮಯಕ್ಕೆ13 ವರ್ಷದ  ಜಾನ್ ಸೀನನ ದೇಹವನ್ನು ಹೊರತೆಗೆದಿದ್ದರು. ತಂಗಿ ಮಹಲಕ್ಷ್ಮಿಯ ದೇಹಕ್ಕಾಗಿ ನಿರಂತರವಾಗಿ ಶೋಧಕಾರ್ಯ ನಡೆಸಿದ ಸಿಬ್ಬಂದಿಗೆ ಮಧ್ಯಾಹ್ನ 4 ಗಂಟೆಗೆ ಮಹಲಕ್ಷ್ಮಿಯ ದೇಹವು ಪತ್ತೆಯಾಗಿದೆ.

ಮಕ್ಕಳ ಮೃತ ದೇಹವನ್ನು ನೋಡಿದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು. ತಾನು ಹೆತ್ತು ಹೊತ್ತು ಸಾಕಿದ ಮಕ್ಕಳ ಮೃತದೇಹವನ್ನು ನೋಡಲಾಗದೆ ಗೋಳಾಡುತ್ತಿರುವ ತಾಯಿಯನ್ನು ನೋಡಿದವರ ಕರುಳು ಚುರ್ ಎನ್ನುವಂತಿದೆ.

RELATED ARTICLES

Related Articles

TRENDING ARTICLES