Monday, December 23, 2024

ಹೆಚ್ಚು ಮಕ್ಕಳನ್ನು ಹೊಂದುವಂತೆ ಸಲಹೆ ನೀಡಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ಆಂದ್ರಪ್ರದೇಶ : ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ, ಜನಸಂಖ್ಯೆ ಸಮತೋಲನದ ದೃಷ್ಟಿಯಿಂದ ಈ ತಲೆಮಾರಿನ ಯುವಕರು ಹೆಚ್ಚು ಮಕ್ಕಳನ್ನು ಹೊಂದಬೇಕಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರ ಬಾಬು ನಾಯ್ಡು ಜನಸಂಖ್ಯಾ ನಿರ್ವಹಣೆಗೆ ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ಯೋಜನೆಯಡಿಯಲ್ಲಿ ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಕ್ಕೆ ಪ್ರೋತ್ಸಾಹ ಧನ ನೀಡಲು ಚಿಂತನೆ ನಡೆಸಲಾಗುವುದು ಎಂದು ಹೇಳಿದರು. ಅಷ್ಟೇ ಅಲ್ಲದೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವವರಿಗೆ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ ನೀಡಲಾಗುವುದು ಎಂಬ ನಿಯಮ ರೂಪಿಸಲು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಚಂದ್ರಬಾಬು ನಾಯ್ಡು ಈ ಹಿಂದೆ ಹೆಚ್ಚು ಮಕ್ಕಳನ್ನು ಹೊಂದುವವರಿಗೆ ಚುನಾವಣೆಯಲ್ಲಿ ಬಾಗವಹಿಸಲು ಅವಕಾಶ ನೀಡುತ್ತಿರಲಿಲ್ಲ. ಈ ರೀತಿಯ ಕಾನೂನನ್ನು ಸಹ ರೂಪಿಸಿದ್ದೆವು ಆದರೆ ಈಗ ಈ ಕಾನೂನನ್ನು ರದ್ದುಪಡಿಸಿ ಹೊಸ ಕಾನೂನುನನ್ನು ರೂಪಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ದಕ್ಷಿಣ ಭಾರತದ ಯುವಜನರು ಶಿಕ್ಷಣ, ನೌಕರಿಗೆಂದು ವಿದೇಶಗಳಿಗೆ ತೆರಳುತ್ತಿದ್ದಾರೆ. ಇನ್ನು ಕೆಲವರು ಉತ್ತರ ಭಾರತ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ, ಈ ಕಾರಣಗಳಿಂದಾಗಿ ದಕ್ಷಿಣ ಭಾರತದಲ್ಲಿ ಯುವಕರ ಸಂಖ್ಯೆ ಕುಸಿದು, ವೃದ್ಧರ ಸಂಖ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದೆ ರೀತಿ ಮುಂದುವರಿದರೆ 2047ರ ವೇಳೆಗೆ ದಕ್ಷಿಣ ಭಾರತದ ತುಂಬೆಲ್ಲ ಬರಿ ವೃದ್ಧರೆ ಕಾಣ ಸಿಗುತ್ತಾರೆ. ಇದರಿಂದ ಅಸಮತೋಲನ ಉಂಟಾಗುತ್ತದೆ. ಇದೆ ಸಮಸ್ಯೆಯನ್ನು ಇಂದು ಜಪಾನ್, ಚೀನಾ ಸಹಿತ ಯುರೋಪಿಯನ್ ರಾಷ್ಟ್ರಗಳು ಅನುಭವಿಸುತ್ತಿವೆ ಎಂದು ಹೇಳಿದರು.

ಕುಸಿಯುತ್ತಿದೆ ಫಲವತ್ತತೆಯ ದರ 

ಉತ್ತರ ಭಾರತ ಜನಸಂಖ್ಯೆಗೆ  ಹೋಲಿಸಿದರೆ, ದಕ್ಷಿಣ ಭಾರತದ ಜನಸಂಖ್ಯೆಯ ದರ ಕುಸಿಯುತ್ತಿದೆ. ಸಾಮಾನ್ಯವಾಗಿ ರಾಷ್ಟೀಯ ಫಲವತ್ತತೆಯ ದರ 2.1 ರಷ್ಟು ಇರಬೇಕು. ಆದರೆ ದಕ್ಷಿಣ ಭಾರತದ ಫಲವತ್ತತೆಯ ದರ 1.6ರಷ್ಟಿದೆ. ಇದರಿಂದಾಗಿ ದಕ್ಷಿಣ ಭಾರತದಲ್ಲಿ 2047ರ ವೇಳೆಗೆ ವೃದ್ದರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES