Sunday, December 22, 2024

ಹಾಸನಾಂಬೆ ಉತ್ಸವಕ್ಕೆ ಕ್ಷಣಗಣನೆ ಆರಂಭ: ಪರಿಶೀಲನೆ ನಡೆಸಿದ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ

ಹಾಸನ : ವಿಶ್ವವಿಖ್ಯಾತ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು. ಹಾಸನ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಇಂದು (ಅ.21) ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಾಸನದ ಸಂಸದ ಶ್ರೇಯಸ್ ಪಟೇಲ್ ಮತ್ತು ಶಾಸಕ ಸ್ವರೂಪ್​ಪ್ರಕಾಶ್ ಹಾಜರಿದ್ದರು.

ಅ.24 ರಿಂದ ನ.3 ರವರೆಗೆ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ನಡೆಯಲಿದ್ದು. ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ದೇವಾಲಯಕ್ಕೆ ಭೇಟಿ ನೀಡಿ ಸಿದ್ದತಾ ಕಾರ್ಯಗಳನ್ನು ಪರಿಶೀಲಿಸಿದರು.ಪರಿಶೀಲನೆ ನಡೆಸಿ ದೇವಾಲಯದ ಮುಖ್ಯದ್ವಾರದ ಬಳಿ ಫೋಟೋಗೆ ಫೋಸ್ ನೀಡಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು.

ಈ ವೇಳೆ ಕೈ ಕೈ ಹಿಡಿದು ನಿಂತಿದ್ದ ಸಂಸದ ಶ್ರೇಯಸ್‌ಪಟೇಲ್ ಹಾಗೂ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್​ರನ್ನು  ನೋಡಿ ಹಾಸ್ಯ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ. ಈ ಫೋಟೋ ತೆಗೆದು ರೇವಣ್ಣಗೆ ಕಳ್ಸೋಕೆ  ಹೇಳ್ತನಿ, ಇದೇ ಫೋಟೋನಾ ಸೋಶಿಯಲ್ ಮಿಡಿಯಾದಲ್ಲಿ ಅಪ್‌ಲೋಡ್ ಮಾಡಲು ಹೇಳ್ತಿನಿ ಎಂದು ಗೇಲಿ ಮಾಡಿದರು.

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಶಾಸಕ ಸ್ವರೂಪ್ ನಾವು ಎಲ್ಲಾ ಕಾರ್ಯಕ್ರಮದಲ್ಲಿ ಜೊತೆಯಾಗಿ ಪಾಲ್ಗೊಳ್ತಿವಿ ಎಂದು ಹೇಳಿದರು.ಆದರೆ  ಸಂಸದ ಶ್ರೇಯಸ್‌ಪಟೇಲ್ ಸಚಿವರ ಹಾಸ್ಯಕ್ಕೆ ನಗುತ್ತಲೇ ನಿಂತಿದ್ದರು. ನಂತರ  ಸಂಸದ ಶ್ರೇಯಸ್‌ಪಟೇಲ್ ಹಾಗೂ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಕೈ ಕೈ ಹಿಡಿದುಕೊಂಡೆ ಹೊರಟರು ಎಂಬ ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES