Wednesday, January 22, 2025

ರಾಜಧಾನಿಯ ಮಳೆ ಸಮಸ್ಯೆಗೆ ದೀರ್ಘಕಾಲದ ಪ್ಲಾನ್ ರೂಪಿಸುತ್ತೇವೆ ಎಂದ ಬ್ರಾಂಡ್ ಬೆಂಗಳೂರಿನ ಹರಿಕಾರ

ಬೆಂಗಳೂರು : ಕಳೆದ ಕೆಲವು ದಿನಗಳಿಂದ ನಗರದಲ್ಲಿ ಬಿಟ್ಟು ಬಿಡದಂತೆ ಮಳೆ ಸುರಿಯುತ್ತಿದ್ದು ಇದರಿಂದಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದ್ದರೆ. ಅಂಡರ್​ಪಾಸ್​ಗಳಲ್ಲಿ ವಾಹನ ಸವಾರರು ಸಿಲುಕಿಕೊಂಡು ಪರದಾಡುದ್ದಾರೆ.

ಇದರ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಪ್ರಕೃತಿಯನ್ನು ನಾವ್ಯಾರು ತಡೆಯೋಕೆ ಆಗಲ್ಲ.ನಾನು ಇಂಜಿನಿಯರ್ಸ್ ಗೆ ಒಂದು ಕಮಿಟಿ ಮಾಡಲು ಹೇಳಿದ್ದೇನೆ, ಒಂದು ದೀರ್ಘಕಾಲದ ಪ್ಲಾನ್ ರೂಪಿಸಬೇಕಾಗಿದೆ ಜಾಸ್ತಿ ಮಳೆ ಬಂದಾಗ ಎಲ್ಲೆಲ್ಲಿ ನೀರು ತುಂಬಿಕೊಂಡು ಸಮಸ್ಯೆ ಆಗುತ್ತೆ ಅನ್ನೊದನ್ನ ನಾಗರೀಕರು ನಮಗೆ ತಿಳಿಸಬೇಕು. ಜಾಗ ಲೊಕೇಶನ್ ಫೋಟೋ ಮೂಲಕ ಲಿಖಿತವಾಗಿ ಸಲ್ಲಿಸಬೇಕು.ಜನರು ಸಲ್ಲಿಸಿದ ಮನವಿಯ ಮೇರೆಗೆ ನಮ್ಮ ಅಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಡಿಸಿಎಂ ಜನರು ತಗ್ಗು ಪ್ರದೇಶಗಳಲ್ಲಿ ಸಾಕಷ್ಟು ಮನೆ ಕಟ್ಟಿಕೊಂಡಿದ್ದಾರೆ,
ಅದನ್ನು ನಾನು ತಪ್ಪು ಅಂತ ಹೇಳಲು ಸಾಧ್ಯವಿಲ್ಲ, ಮಳೆ ಹೆಚ್ಚು ಬಂದಾಗ ಈ ರೀತಿ ಆಗುತ್ತೆ.ಮಳೆ ರಾತ್ರಿ‌ ಇಡೀ ಬಂದಿದೆ ನಾನು ಕಂಟ್ರೋಲ್ ರೂಮ್ ಬಳಿ ಮಾಹಿತಿ ಪಡೆದುಕೊಂಡಿದ್ದೇನೆ. ಇಂದು ಸಂಜೆ ಬೆಂಗಳೂರು ರೌಂಡ್ಸ್ ಮಾಡ್ತೇನೆ. ವ್ಯವಸ್ಥಿತವಾಗಿ ಈ ಸಮಸ್ಯೆಗಳನ್ನ ಬಗೆಹರಿಸುವಂತೆ ತೀರ್ಮಾನ ಮಾಡುತ್ತೇವೆ ಇದಕ್ಕೆ ಜನ ಕೂಡ ಸಹಕಾರ ಕೊಡಬೇಕು ಎಂದು ಹೇಳಿದರು.

RELATED ARTICLES

Related Articles

TRENDING ARTICLES