Monday, December 23, 2024

ಪ್ರತಿಭಟನೆ ಮಾಡಲು ಮುಂದಾದ ಮಧ್ಯದಂಗಡಿ ಮಾಲೀಕರು: ಎಣ್ಣೆ ಸಿಗದೆ ಪರದಾಡುತ್ತಾರ ಮದ್ಯಪ್ರಿಯರು?

ಬೆಂಗಳೂರು : ರಾಜ್ಯದಲ್ಲಿ ಅಕ್ಟೋಬರ್25 ರಂದು ಮದ್ಯ ಸಿಗಲ್ವಾ..? ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ
ಸರ್ಕಾರದ ವಿರುದ್ದ ಮದ್ಯದಂಗಡಿ ಮಾಲೀಕರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

ಹೌದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 25ರಂದು ಬೃಹತ್ ಪ್ರೊಟೆಸ್ಟ್ ಮಾಡಲು ಮಧ್ಯದಂಗಡಿ ಮಾಲೀಕರು ತಿರ್ಮಾನ ಮಾಡಿದ್ದು.ಬೆಂಗಳೂರಿನ ಫ್ರೀಡಂ ಪಾರ್ಕ್ ಬೃಹತ್ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.ಬೇಡಿಕೆಗಳನ್ನ ಈಡೇರಿಸುವಂತೆ ಈ ಹಿಂದೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು ಬೇಡಿಕೆ ಈಡೇರಿಸದ ಸರ್ಕಾರದ ಧೋರಣೆ ನಡೆಸುತ್ತಿದೆ. ಈ ಹಿನ್ನಲೆ ಪ್ರತಿಭಟನೆ ನಡೆಸಲಗುತ್ತಿದ್ದು. ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಬಾರ್ ಮಾಲೀಕರು ಭಾಗವಹಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES