ಕಲಬುರಗಿ : ಕೌಟುಂಬಿಕ ಕಲಹ ಹಿನ್ನಲೆ ಮೂರು ಮಕ್ಕಳಿಗೆ ವಿಷ ಕುಡಿಸಿ ತಾಯಿಯು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಜಂಗ್ಲಿಪೀರ್ ತಾಂಡಾದಲ್ಲಿ ನಡೆದಿದೆ. ಸದ್ಯ ಎಲ್ಲರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗೀತ ಎಂಬ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚೈತನ್ಯ (4) ಧನುಷ್ (3) ಲಕ್ಷ್ಮೀ ಒಂದೂವರೆ ತಿಂಗಳು ಮಗುವಿಗು ವಿಷ ಕುಡಿಸಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಮಕ್ಕಳಿಗೆ ಹೊಡೆಯೋದು ಮಾಡ್ತಿದ್ದ ಗೀತಾಳನ್ನು ಆಕೆಯ ಪತ್ನಿ ಪ್ರಶ್ನಿಸುತ್ತಿದ್ದನು ಈ ಕಾರಣಕ್ಕಾಗಿ ಇವರಿಬ್ಬರ ನಡೆವೆ ಜಗಳವಾಗುತ್ತಿತ್ತು ಎಂಬ ಮಾಹಿತಿ ದೊರೆತಿದ.
ಗಂಡನೊಂದಿಗೆ ಜಗಳವಾಡಿದ ಪತ್ನಿ ಗೀತಾಬಾಯಿ ಸ್ಪ್ರೈಟ್ ತಂಪು ಪಾನಿಯದ ಬಾಟಲಿಯಲ್ಲಿ ಬೆಳೆಗೆಳಿಗೆ ಹೊಡೆಯುವ ಕ್ರಿಮಿ ನಾಶಕವನ್ನು ಬೆರೆಸಿ ಮಕ್ಕಳಿಗೆ ಕುಡಿಸಿ ತಾನು ಕುಡಿದಿದ್ದಾರೆ. ವಿಷ ಕುಡಿದ ಬಳಿಕ ಹೊಟ್ಟೆ ನೋವಿನಿಂದ ಚೀರಾಡುತ್ತಿದ್ದ ಮಕ್ಕಳನ್ನುತಕ್ಷಣ ತಾಂಡಾದ ಅಕ್ಕ ಪಕ್ಕದ ನಿವಾಸಿಗಳು ಗಂಡನಿಗೆ ವಿಷಯ ಮುಟ್ಟಿಸಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸದ್ಯ ಚಿಂಚೋಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಡೆಯುತ್ತಿದ್ದು. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.