ಶಿವಮೊಗ್ಗ: ವಿಜಯದಶಮಿ ಹಿನ್ನೆಲೆಯಲ್ಲಿ ನಗರದ ಕರ್ನಾಟಕ ಸಂಘದ ಆವರಣದಿಂದ ನಡೆದ RSS ಪಥಸಂಚನನ ನಡೆದಿದ್ದು. ಸುರಿಯುವ ಮಳೆಯನ್ನು ಲೆಕ್ಕಿಸದೆ ಸಂಸದರು ಮತ್ತು ಶಾಸಕರು ಪಥಸಂಚಲಮದಲ್ಲಿ ಭಾಗವಹಿಸಿದರು.
ಭಗವಧ್ವಜರೋಹಣ ನೆರವೇರಿಸಿದ ನಂತರ ಪಥ ಸಂಚಲನ ಆರಂಭವಾಯಿತು. ಪಥಸಂಚಲನದಲ್ಲಿ ಭಾಗವಹಿಸಿದ ಆರ್ಎಸ್ಎಸ್ ಕಾರ್ಯಕರ್ತರು ಬ್ಯಾಂಡ್ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಸುರಿವ ಮಳೆ ನಡುವೆಯೇ ಲಾಠಿ ಹಿಡಿದು ಹೆಜ್ಜೆ ಹಾಕಿದ ಗಣವೇಶಧಾರಿಗಳು
ಪಥಸಂಚಲನದಲ್ಲಿ ಭಾಗವಹಿಸಿದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಳೆಯನ್ನು ಲೆಕ್ಕಿಸದೆ ಹೆಜ್ಜೆ ಹಾಕಿದರು. ಪಥ ಸಂಚಲನದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ ಭಾಗಿಯಾಗಿದರು.
ಖಾಕಿ ಪ್ಯಾಂಟ್, ಬಿಳಿ ಅಂಗಿ ಧರಿಸಿ, ಲಾಠಿ ಹಿಡಿದು ಹೊರಟ ಗಣವೇಷಧಾರಿಗಳು.ನಗರದ ಮುಖ್ಯ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.ನಗರದ ಕರ್ನಾಟಕ ಸಂಘದಿಂದ ಮೈಲಾರಲಿಂಗೇಶ್ವರ ದೇವಾಲಯದವರೆಗೆ ಪಥಸಂಚಲನ ನಡೆಯಿತು.