Monday, December 23, 2024

ಮದುವೆಗೆ ಹೊರಟಿದ್ದ ಬಸ್ ಪಲ್ಟಿ : 30ಕ್ಕೂ ಹೆಚ್ಚು ಜನರಿಗೆ ಗಾಯ

ರಾಮನಗರ : ಮದುವೆಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಕನಕಪುರ ತಾಲೂಕಿನ ಸಂಗಮ ಸಮೀಪ ನಡೆದಿದೆ. ಮದುವೆಗೆ ಎಂದು ಹೊರಟಿದ್ದ ಬಸ್ ಪಲ್ಟಿಯಾಗಿದ್ದು. ಗಾಯಾಳಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನಕಪುರ ತಾಮಡಿವಾಳದ ಶಿವನಾಂಕೇಶ್ವರ ದೇವಾಲಯದಲ್ಲಿ ಮದುವೆ ಹಿನ್ನೆಲೆ. ಜನರು  ತಗಣೇಗೌಡನ ದೊಡ್ಡಿಯಿಂದ ಮಡಿವಾಳಕ್ಕೆ ಮದುವೆಗೆ ಎಂದು ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. 60ಕ್ಕೂ ಹೆಚ್ಚು ಮಂದಿ ಈ ಖಾಸಗಿ ಬಸ್ ನಲ್ಲಿ ಮದುವೆಗೆ ತೆರಳುತ್ತಿದ್ದರು ಎಂದು ತಿಳಿದಿದ್ದು. ಸಂಗಮದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ ಅವಘಡ ಸಂಬವಿಸಿದೆ ಎಂದು ಮಾಹಿತಿ ದೊರೆತಿದೆ.

ಈ ಅಪಘಾತದಲ್ಲಿ ಓರ್ವ  ಮಹಿಳೆಯ  ಕೈ ಕಟ್​​ ಆಗಿದ್ದು , ಐವರಿಗೆ ಗಂಭೀರಗಾಯವಾಗಿದೆ, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನುಸ್ಥಳೀಯರು ಆಸ್ಪತ್ರೆಗೆ ರವಾನೆ ಮಾಡಿದ್ದು.
ಗಾಯಾಳುಗಳಿಗೆ ಕನಕಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ , ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಸಾತನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES