Wednesday, December 18, 2024

ಭುವನ್ ಹರ್ಷಿಕಾ ದಂಪತಿಗೆ ಅದ್ದೂರಿ ಬೇಬಿ ಶವರ್

ಇನ್ನು ಕೆಲವೇ ದಿನಗಳಲ್ಲಿ ಮಗುವಿನ ಆಗಮನದ ಖುಷಿಯಲ್ಲಿರುವ ಭುವನ್ ಹರ್ಷಿಕಾ ದಂಪತಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗು ಶಿಲ್ಪಾ ಗಣೇಶ್ ಅವರು ಸಿನಿಮಾ ಇಂಡಸ್ಟ್ರಿ ಯ ತಮ್ಮ ಎಲ್ಲಾ ಗೆಳೆಯರನ್ನು ಆಹ್ವಾನಿಸಿ ಅದ್ದೂರಿಯಾದ “ಬೇಬಿ ಶವರ್” ಮಾಡಿದ್ದಾರೆ. ಆಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ, ಶೃತಿ ಹಾಗು ಮಗಳು ಗೌರಿ , ಪ್ರಿಯಾಂಕಾ ಉಪೇಂದ್ರ ,ಅನು ಪ್ರಭಾಕರ್ ರಘು ಮುಖರ್ಜಿ,ನಾಯಕಿಯರಾದ ಶರಣ್ಯ, ನಿಕಿತಾ , ಅಮೂಲ್ಯ ಜಗದೀಶ್, ದಿಶಾ ಹಾಗು ಡಾ. ಪ್ರೀತಿ ಸುಧಾಕರ್ , ಶೀಲಾ ಯೋಗೀಶ್ವರ್ ಇನ್ಉ ಅನೇಕರು ಬೇಬಿ ಶವರ್ ನಲ್ಲಿ ಭಾಗಿಯಗಿದ್ರು.

ಅಮ್ಮನಾಗುವ ನಿರೀಕ್ಷೆಯಲ್ಲಿರುವ ಹರ್ಷಿಕಾ ಗೆ ಮುತ್ತುಗಳ ಹಾಗು ಉಡುಗೊರೆಗಳ ಸುರಿ ಮಳೆಯೇ ಬಂದಿದೆ. ಬೇಬಿ ಶವರ್ ನಲ್ಲಿ ಹಿರಿಯರು ಕಿರಿಯರು ಎಲ್ಲಾರು ಒಟ್ಟಿಗೆ ಕುಣಿದು ,ಹಾಡಿ ಖುಷಿ ಪಟ್ಟಿದ್ದು ವಿಶೇಷವಾಗಿತ್ತು . ಶೃತಿ ಅವರ ಮಗಳು ಗೌರಿ ಹರ್ಷಿಕಾಗಾಗಿ ಹಾಡಿ ಸರ್ ಪ್ರೈಸ್ ನೀಡಿದ್ದಾರೆ.

ಬೇಬಿ ಥೀಮ್ ಕೇಕ್, ಥೀಮ್ ಡೆಕೊರೇಷನ್ ಬೇಬಿ ಶವರ್ ನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು. ಈ ಎಲ್ಲಾ ಕಾರ್ಯಗಳನ್ನು ಶಿಲ್ಪಾ ಗಣೇಶ್ ಅವರು ಖುದ್ದಾಗಿ ನಿಂತು ಈ ಯುವ ಜೋಡಿ ಗೋಸ್ಕರ ಮಾಡಿದ್ದಾರೆ. ಅಕ್ಟೋಬರ್ ನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಹರ್ಷಿಕಾ ಮತ್ತು ಭುವನ್.

RELATED ARTICLES

Related Articles

TRENDING ARTICLES