Monday, December 23, 2024

‘ದಸ್ಕತ್’ ತುಳು ಸಿನೆಮಾದ ಮೋಷನ್ ಪೋಸ್ಟರ್​ಗೆ ಫಿದಾ ಆದ ತುಳುನಾಡಿನ ದಿಗ್ಗಜರು

ಕೃಷ್ಣ ಜೆ. ಪಾಲೇಮಾರು ಅರ್ಪಿಸುವ 77 ಸ್ಟುಡಿಯೋಸ್ ರಾಘವೇಂದ್ರ ಕುಡ್ವ ರವರ ನಿರ್ಮಾಪಕದಲ್ಲಿ, ಅನೀಶ್ ಪೂಜಾರಿ ವೇಣೂರು ಇವರ ನಿರ್ದೇಶನದಲ್ಲಿ ಮೂಡಿ ಬರಲಿರುವ ‘ದಸ್ಕತ್’ ತುಳು ಸಿನೆಮಾದ ಮೋಷನ್ ಪೋಸ್ಟರ್ ನ್ನು ಬಿಡುಗಡೆಗೊಳಿಸಿರುವ ತುಳುನಾಡಿನ ದಿಗ್ಗಜ ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್ ಭೋಜರಾಜ್ ವಾಮಂಜೂರ್ ರವರು ಮೋಷನ್ ಪೋಸ್ಟರ್ ನೋಡಿ ಫಿದಾ ಆಗಿದ್ದಾರೆ. ಈ ಸಿನೆಮಾ ಹೊಸ ಮೈಲಿಗಲ್ಲನ್ನು ನಿರ್ಮಿಸಲಿದೆ ಎಂದು ಹಾಡಿ ಹೊಗಳಿದ್ದಾರೆ.

ಸಿನೆಮಾ ನೋಡಲು ಕಾತರರಾಗಿದ್ದೇವೆ ಎಂಬ ಪ್ರೇಕ್ಷಕರ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಒಟ್ಟಿನಲ್ಲಿ ತುಳು ಸಿನೆಮಾ ದೇಶ – ವಿದೇಶಗಳಲ್ಲಿ ಮಿಂಚಲಿ ಎಂಬುದು ಕಲಾಭಿಮಾನಿಗಳ ಹಾರೈಕೆ

RELATED ARTICLES

Related Articles

TRENDING ARTICLES