Tuesday, January 28, 2025

Ganesh Chaturthi : ಗಜವಾಹನ ಮಹಾಗಣಪತಿಯ ಆರಾಧನೆ

ಪ್ರಥಮ ಪೂಜಿತನು, ವಿಘ್ನ ನಿವಾರಕನೂ ಇಡೀ ಜಗತ್ತಿನೆಲ್ಲೆಡೆ ವಿಜೃಂಭಣೆಯಿಂದ ಸಕಲ ಜನರುಗಳಿಂದಲೂ ಆರಾಧಿಸಲ್ಪಡುವವನೂ, ಯವಾದೇ ಕಾರ್ಯವನ್ನು ಯಶಸ್ವಿಯಾಗಿ ಮಾಡಬೇಕೆಂದರೆ ಮೊದಲಿಗೆ ಶ್ರೀ ಸಿದ್ಧಿವಿನಾಯಕನನ್ನು ಪೂಜಿಸಲೇಬೇಕು.

ನಮ್ಮ ಸನಾತನ ಪರಂಪರೆಯಲ್ಲಿ ಶ್ರೀಗಣೇಶನಿಗೆ ಅತ್ಯಂತ ಉನ್ನತ ಸ್ಥಾನವನ್ನು ನೀಡಿದ್ದಾರೆ. ಗಜಮುಖನ ದರ್ಶನ ಮಾತ್ರದಿಂದಲೇ ನಮ್ಮ ಇಷ್ಟಾರ್ಥಗಳು ಸಹ ಈಡೇರುತ್ತವೆ. ನಮ್ಮ ಕಷ್ಟಗಳೆಲ್ಲಾ ದೂರವಾಗುತ್ತವೆ. ಇಂತಹ ಶ್ರೀಗಣೇಶನನ್ನು ನಮ್ಮ ಸನಾತನ ಪರಂಪರೆಯಲ್ಲಿ ಭಾದ್ರಪದ ಮಾಸದ ಶುದ್ಧ ಚತುರ್ಥಿಯಂದು ವಿಶೇಷವಾಗಿ ಆರಾಧನೆಯನ್ನು ಮಾಡುತ್ತೇವೆ.

ಭಾದ್ರಪದ ಮಾಸದ ಶುದ್ಧ ಚತುರ್ಥಿಯಲ್ಲಿ ಗಣೇಶನನ್ನು ಆರಾಧನೆ ಮಾಡುವುದರಿಂದ ಚತುರ್ವಿಧ ಫಲ ಪುರುಷಾರ್ಥಗಳನ್ನು ಭಕ್ತರು ಪಡೆಯುತ್ತಾರೆ. ನಮ್ಮ ಅನೇಕ ಶಿಷ್ಯಂದಿರು ಈ ಬಾರಿಯ ಗಣೇಶ ಚತುರ್ಥಿಯ ಸಂಬಂಧವಾಗಿ ಅವರಿಗೆ ಉಂಟಾಗಿರುವ ಸಂದೇಹಗಳನ್ನು ಪರಿಹರಿಸಿಕೊಳ್ಳುಲು ಅನೇಕ ವಿಷಯಗಳನ್ನು ಪತ್ರದ ಮೂಲಕ ಕೇಳಿದ್ದಾರೆ.

ಅದೇನೆಂದರೆ… ಗುರುಗಳೇ ಈ ವರ್ಷ 2024 ರಂದು ಶ್ರೀ ಗಣೇಶನ ಹಬ್ಬವನ್ನು ಎಂದು ಆಚರಿಸಬೇಕು. ಈ ಬಾರಿ ಯಾವ ವಾಹನ ಕುಳಿತಿರುವ ಗಣಪತಿಯನ್ನು ಪೂಜಿಸಬೇಕು ದಯವಿಟ್ಟು ತಿಳಿಸಿರಿ?

ಬನ್ನಿ ಶಿಷ್ಯರೇ ಇದರ ಬಗ್ಗೆ ಗಮನಿಸೋಣ…
ಗಣೇಶನನ್ನು ಚತುರ್ಥಿಯಂದು ಪೂಜಿಸಬೇಕೆಂದು ಹೇಳುತ್ತದೆ. ಅದರಲ್ಲೂ ತೃತೀಯ ಸಂಯುಕ್ತ ಚತುರ್ಥಿ ತಿಥಿಯು ಶ್ರೀಗಣೇಶನಿಗೆ ಬಹು ಪ್ರಿಯವಾದದ್ದೆಂದು ನಮ್ಮ ಗ್ರಂಥಗಳೆಲ್ಲಾ ತಿಳಿಸಿವೆ.

ಈ ಬಾರಿ ಶ್ರೀವರಸಿದ್ಧಿವಿನಾಯಕ ಚತುರ್ಥಿಯನ್ನು 07-09-2024ರ ಶನಿವಾರದಂದು ಆಚರಿಸಬೇಕು.

ಗೌರಿ ಸಮಯ :ಶುಕ್ರವಾರ 06/09/2024
05.30am ದಿಂದ 08.30 am ವರೆಗು ಮತ್ತು 12.30 pm ರಿಂದ 1.00 pm ವರೆಗು
ನೈವೇದ್ಯ : ಸಿಹಿ ಪೊಂಗಲ್, ಅಕ್ಕಿ ಪಾಯಸ, ಶ್ರೀ ಫಲ

ಗಣಪತಿ ಸಮಯ : ಶನಿವಾರ
07/09/2024
06.03 am ದಿಂದ 08.48 am ವರೆಗು ಮತ್ತು 11.15am ದಿಂದ 1.48 pm ವರೆಗು
ನೈವೇದ್ಯ : ಮೋದಕ, ಕಡಬು, ಸಿಹಿ ತಿನಸುಗಳು, ಒಬ್ಬಟ್ಟು, ಚಕ್ಕುಲಿ, ಲಡ್ಡು, ಚಿತ್ರಾನ್ನ, ಮೊಸರನ್ನ, ಅವಲಕ್ಕಿ

ಗೌರಿ ಸಮಯ :ಶುಕ್ರವಾರ 06/09/2024
05.30am ದಿಂದ 08.30 am ವರೆಗು ಮತ್ತು 12.30 pm ರಿಂದ 1.00 pm ವರೆಗು
ನೈವೇದ್ಯ : ಸಿಹಿ ಪೊಂಗಲ್, ಅಕ್ಕಿ ಪಾಯಸ, ಶ್ರೀ ಫಲ

ಗಣಪತಿ ಸಮಯ : ಶನಿವಾರ
07/09/2024
06.03 am ದಿಂದ 08.48 am ವರೆಗು ಮತ್ತು 11.15am ದಿಂದ 1.48 pm ವರೆಗು
ನೈವೇದ್ಯ : ಮೋದಕ, ಕಡಬು, ಸಿಹಿ ತಿನಸುಗಳು, ಒಬ್ಬಟ್ಟು, ಚಕ್ಕುಲಿ, ಲಡ್ಡು, ಚಿತ್ರಾನ್ನ, ಮೊಸರನ್ನ, ಅವಲಕ್ಕಿ

RELATED ARTICLES

Related Articles

TRENDING ARTICLES