ದಾವಣಗೆರೆ : ನಿಮಗೆ ತಾಕತ್ತಿದ್ರೆ, ನಿಮ್ಮಪ್ಪನ ಮಕ್ಕಳಾಗಿದ್ರೆ ರಾಜಭವನಕ್ಕೆ ನುಗಿ ನೋಡೋಣ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು ಎಂಎಲ್ಸಿ ಐವಾನ್ ಡಿಸೋಜಾ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಸವಾಲ್ ಎಸೆದಿದ್ದಾರೆ.
ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮತ್ತು ಅವಹೇಳನ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತಾಡಿದ ಅವರು, ನಿಮಗೆ ತಾಕತ್ತಿದ್ದರೆ, ನೀವು ನಿಮ್ಮಪ್ಪನ ಮಕ್ಕಳಾಗಿದ್ರೆ ರಾಜ್ಯ ಭವನಕ್ಕೆ ನುಗ್ಗಿ, ಅಯೋಗ್ಯ ಡಿಸೋಜಾ ಅಥವಾ ಕಾಂಗ್ರೆಸ್ ಸಚಿವರು ಹೇಳ್ತಾರೆ. ನಿಮಗೆ ತಾಕತ್ತಿದ್ದರೆ, ನಿಮ್ಮಪ್ಪನ ಮಕ್ಕಳಾಗಿದ್ರೆ ರಾಜಭವನಕ್ಕೆ ನುಗ್ಗಿ ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಇನ್ನು ನೀವು ನುಗ್ಗುವರಿಗೆ ನಾವೇನು ಕಡಲೆಕಾಯಿ ತಿಂತಾ ಇರ್ತೆವಿ ಅಂದ್ಕೊಂಡಿದ್ದಿರಾ? ನಮ್ಮದು ಒಬ್ಬ ವ್ಯಕ್ತಿ ವಿರುದ್ಧದ ಹೋರಾಟ ಅಲ್ಲ, ಖಾಸಗಿ ವ್ಯಕ್ತಿಗಳ ದೂರಿನನ್ವಯ ಕಾನೂನು ತಜ್ಞರ ಜೊತೆ ಚರ್ಚಿಸಿ ಅನುಮತಿ ನೀಡಿದ್ದಾರೆ. ಅನುಮತಿ ಕೊಟ್ಟ ಮೇಲೆ ಕಾನೂನಾತ್ಮಕ ಹೋರಾಟ ಮಾಡಿ, ದಾರಿಯಲ್ಲಿ ಬೀದಿಯಲ್ಲಿ ಅಲ್ಲ, ಬಾಂಗ್ಲಾ ದೇಶಕ್ಕೆ ಹೋಲಿಕೆ ಮಾಡ್ತಿಯಾ..ಡಿಸೋಜಾ…? ಎಂದು ಎಂ.ಪಿ ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.
ಅದುವಲ್ಲದೇ, ಕಾಂಗ್ರೆಸ್ ಸಚಿವರು ರಾಜ್ಯಪಾಲರಿಗೆ ಅವಮಾನ ಮಾಡಿದ್ದಾರೆ. ನಮ್ಮ ಹೊರಟ ಸಿದ್ದರಾಮಯ್ಯ ವಿರುದ್ಧ ಅಷ್ಟೇ ಅಲ್ಲ ಇಡೀ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ. ಕಾಂಗ್ರೆಸ್ಸಿಗರು ರಾಜ್ಯಪಾಲರಿಗೆ ಅವಮಾನ ಮಾಡಿದ್ದಾರೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಯಡಿಯೂರಪ್ಪನವರ ಪ್ರಕರಣದಲ್ಲಿ ನಾವು ರಾಜ್ಯಪಾಲರ ನೋಟಿಸ್ಗೆ ಗೌರವ ನೀಡಿದ್ವಿ. ಆದರೆ ನೀವು ರಸ್ತೆಗಳಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದೀರಿ. ಇದು ನೀವು ಸಂವಿಧಾನಕ್ಕೆ ನೀಡುವ ಗೌರವನಾ? ರಾತ್ರೋರಾತ್ರಿ ಬೈರತಿ ಸುರೇಶ್ ವಿಶೇಷ ವಿಮಾನದಲ್ಲಿ ಹೋಗಿ ದಾಖಲೆಗಳನ್ನು ತಿರುಚಿಲ್ವಾ? ವೈಟ್ನರ್ ಹಾಕಿ ದಾಖಲೆ ತಿದ್ದುಪಡಿ ಮಾಡ್ತಿರಾ? ಕಾಂಗ್ರೆಸ್ನವರು ಭ್ರಷ್ಟಾಚಾರಿಗಳು ಹೌದು! ಭಯೋತ್ಪಾದಕರು ಹೌದು! ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದರು.
ಸದ್ಯ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದು ನಿಮ್ಮನ್ನು ವೈಭವೀಕರಿಸಲು ಅಲ್ಲ. ನೀವು ಮಾಡಿದ ವಾಲ್ಮೀಕಿ ನಿಗಮ, ಮೂಡಾ ಸೇರಿದಂತೆ ಹಲವು ಭ್ರಷ್ಟಾಚಾರದ ವಿರುದ್ದ ಪಾದಯಾತ್ರೆ ಮಾಡಿದ್ವಿ. ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿ ಇದ್ದವರು ಅವರಿಗೆ ಗೌರವ ನೀಡಬೇಕು ಎಂದು ದಾವಣಗೆರೆಯಲ್ಲಿ ಪ್ರತಿಭಟನೆ ನಂತರ ಎಂ.ಪಿ ರೇಣುಕಾಚಾರ್ಯ ಅವರು ಕಿಡಿಕಾರಿದರು.