Friday, November 22, 2024

ಕುಮಾರಸ್ವಾಮಿ, ಸಿಎಂ ಬೇಡ ನನ್ನ ಫೇಸ್​ ಮಾಡಿ : ಸಚಿವ ಜಮೀರ್​ ಅಹ್ಮದ್​

ಬೆಂಗಳೂರು: ರಾಜ್ಯಪಾಲರನ್ನ ಪ್ರಾಸಿಕ್ಯೂಷನ್​ಗೆ ಅನುಮತಿ ಕೇಳಿರೋದು ಸರ್ಕಾರವಲ್ಲ, ಲೋಕಾಯುಕ್ತ ಎಸ್​ಐಟಿ ಅಧಿಕಾರಿಗಳು ಅನುಮತಿ ಕೇಳಿರೋದು ಎಂದು ವಸತಿ ಸಚಿವ ಜಮೀರ್ ಅಹ್ಮದ್​ ಖಾನ್ ಅವರು ಹೇಳಿದರು.

ಸರ್ಕಾರದ ಕುತಂತ್ರದಿಂದ ಎಸ್​​ಐಟಿ ಲೋಕಾಯುಕ್ತ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್​ಗೆ ಕೇಳಿದೆ ಎಂಬ ಕುಮಾರಸ್ವಾಮಿ ಆರೋಪ ವಿಚಾರದ ಬಗ್ಗೆ ಮಾತಾಡಿದ ಅವರು, ನನ್ನ ಯಾರು ಏನು ಮಾಡೋಕೆ ಆಗೊಲ್ಲ ಅಂತ ಹೇಳಿದ್ದಾರೆ. ಎಸ್​ಐಟಿ ಅನುಮತಿ ಕೇಳಿರೋದಕ್ಕೆ ಸಿದ್ದರಾಮಯ್ಯ ಯಾಕೆ ಮಧ್ಯೆ ಬರ್ತಾರೆ. ಅಧಿಕಾರಿಗಳು ನವೆಂಬರ್​ನಲ್ಲಿ ರಾಜ್ಯಪಾಲರಿಗೆ ಅನುಮತಿ ಕೇಳಿದ್ದಾರೆ ಆದರೆ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಇದನ್ನೆ ನಾವು ರಾಜ್ಯಪಾಲರಿಗೆ ಕೇಳ್ತಿರೋದು ಎಂದರು.

ಸಿದ್ದರಾಮಯ್ಯ ಅವರ ಮೇಲೆ ಖಾಸಗಿ ಅವರು ದೂರು ಕೊಟ್ಟಿದ್ದಕ್ಕೆ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ರು ಕುಮಾರಸ್ವಾಮಿ ವಿರುದ್ದ ಎಸ್​ಐಟಿ ಪ್ರಾಸಿಕ್ಯೂಷನ್​ಗೆ ಅನುಮತಿ ಕೇಳಿದೆ, ಯಾಕೆ ಕೊಡಲಿಲ್ಲ. ಸ್ವಾಮಿ ಕುಮಾರಸ್ವಾಮಿ ಅವರೇ ನಿಮಗೆ ಯಾವ ನೈತಿಕ ಹಕ್ಕು ಇದೆಯಾ? ಸಿದ್ದರಾಮಯ್ಯ ಬಗ್ಗೆ ಮಾತಾಡೋಕೆ ಎಂದು ಗುಡುಗಿದ್ದಾರೆ.

ಮುಡಾದಲ್ಲಿ ಸಿದ್ದರಾಮಯ್ಯ ಪಾತ್ರ ಏನಿದೆ. ಇದರಲ್ಲಿ ತಪ್ಪೇನು ಇದೆ. ಸಿದ್ದರಾಮಯ್ಯ ಸಿಎಂ ಇದ್ದಾಗ ಯಾವುದೇ ಜಾಗ ತಗೊಂಡಿಲ್ಲ. ಬದಲಿ ಜಾಗ ಕೊಡಿ ಅಂತ ಪತ್ರ ಅವರ ಶ್ರೀಮತಿ ಬರೆದಿದ್ರು ಪತ್ರದ ಪ್ರಕಾರ ಬಿಜೆಪಿ ಅವಧಿಯಲ್ಲಿ ಸೈಟ್ ಕೊಟ್ಡಿರೋದು. ಕೇವಲ ಸಿದ್ದರಾಮಯ್ಯ ಹೆಂಡತಿಗೆ ಸೈಟ್ ಕೊಟ್ಟಿಲ್ಲ. ಬಹಳ ಜನರಿಗೆ ಸೈಟ್ ಕೊಡಲಾಗಿದೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರ ಏನಿದೆ. ಸಿಎಂ ಎಲ್ಲ ಮೊದಲು ಕುಮಾರಸ್ವಾಮಿ ಮೊದಲು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕುಮಾರಸ್ವಾಮಿ ಮಾತಾಡಿದ್ರೆ ಧಮ್ಕಿ ಹಾಕೋದು ಬ್ಲ್ಯಾಕ್ ಮಾಡೋದು. ಇದು ಎಷ್ಟು ದಿನ ನಡೆಯುತ್ತೆ‌ ಕುಮಾರಸ್ವಾಮಿ ಅವರೇ! ಸಿದ್ದರಾಮಯ್ಯ ಬೇಡ ನೀವು ಮೊದಲು ಜಮೀರ್ ನನ್ನ ಫೇಸ್ ಮಾಡಿ. ಬಾಯಿಗೆ ಬಂದಂತೆ ಮಾತಾಡೋದಾ? ನಾನು ರಾಮನಗರದಲ್ಲಿ ನಿಮಗೆ ಏನ್ ಕೇಳಿದೆ. ಸಿಎಂ ಆಗಿದ್ದಾಗ ಕುಮಾರಸ್ವಾಮಿ ಎಷ್ಟು ಮನೆ ರಾಮನಗರ ಜನರಿಗೆ ಕೊಟ್ಟಿದ್ದೀರಾ ಅಂತ ಕೇಳಿದೆ. ಸಿಎಂ ಆಗಿದ್ದರು ನಿಮ್ಮ ಜಿಲ್ಲೆಗೆ ಮನೆ ಕೊಟ್ಟಿಲ್ಲ, ಇದನ್ನ ಕೇಳಿದ್ದು ನಾನು ಇದಕ್ಕೆ ಅವನು‌ ಯಾರು ಒಂದು ಬಸ್​ಗೆ ಎರಡು ನಂಬರ್ ಹಾಕಿಕೊಂಡು ಓಡಿಸಿದ್ದವನು ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಒಂದು ನಂಬರ್​ಅನ್ನು ಎರಡು ಬಸ್​ಗೆ ಹಾಕಿಸಿ ಓಡಿಸೋನು ಆಗಿದ್ರೆ 2017ರವರೆಗೆ ನನ್ನನ್ನ ಯಾಕೆ ನಿಮ್ಮ ಜೊತೆ ಇಟ್ಟುಕೊಂಡ್ರಿ. ಒಂದು ನಂಬರ್​ಗೆ ಎರಡು ಬಸ್ ಓಡಿಸೋದು ಅದು ನಂದು ಅಲ್ಲ, ಅದು ನಮ್ಮ ಚಿಕ್ಕಪ್ಪನ ಬಸ್. ಈಗಾಗಲೇ ಕೋರ್ಟ್​ನಲ್ಲಿ ನಾನು ಕ್ಲೀನ್ ಚಿಟ್ ಪಡೆದುಕೊಂಡಿದ್ದೇನೆ. ನಾನು ನಿಮ್ಮ ರೀತಿ ಅಕ್ರಮವಾಗಿ ಕೆಲಸ ಮಾಡಿಲ್ಲ. ನಿಮ್ಮ ಬಗ್ಗೆ ನಾನು ಹೇಳಾ? ನೀವು ಏನು ಮಾಡಿದ್ದೀರಾ ಹೇಳಾ? ಒಂದು ಮನೆ ಇಟ್ಟುಕೊಂಡು ಹೊರಗೆ ಏನ್ ಮಾಡಿದ್ದೀರಾ? ಬಾಯಿ ಬಿಡ್ಲಾ? ಅವೆಲ್ಲ ಬೇಡ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್​ ಅಹ್ಮದ್​ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES