Sunday, December 22, 2024

ಲೋಕಾಯುಕ್ತರಿಗಿಂತ ಸಿಬಿಐನವರೇ ಪರ್ವಾಗಿಲ್ಲ; ಲೋಕಾಧಿಕಾರಿಗಳು ಹಿಂಸೆ ಕೊಡ್ತಿದ್ದಾರೆ : ಡಿಸಿಎಂ ಡಿಕೆಶಿ

ಬೆಂಗಳೂರು : ಲೋಕಾಯುಕ್ತ ಪೊಲೀಸ್​ ಅಧಿಕಾರಿಗಳು ಸಮನ್ಸ್ ಕೊಟ್ಟಿದ್ರು ವಿಚಾರಣೆಗೆ ಹಾಜರಾಗೋಕೆ ಹೇಳಿದ್ರು ನಿನ್ನೆ ಆಗಿರಲಿಲ್ಲ ಇವತ್ತು ಬಂದಿದ್ದೀನಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಇಂದು ಲೋಕಾಯುಕ್ತ ಕಚೇರಿಗೆ ಆಗಮಿಸಿದ ವಿಚಾರಣೆ ಎದುರಿಸಿದರು ಬಳಿಕ ಮಾಧ್ಯಮದ ಜೊತೆ ಮಾತಾಡಿದ ಅವರು, ನಿನ್ನೆ ವಿಚಾರಣೆಗೆ ಹಾಜರಗೋಕೆ ಹೇಳಿದ್ರು, ಆಗಿರಲಿಲ್ಲ. ಇವತ್ತು ಬಂದಿದ್ದೀನಿ, ಎರಡು ಗಂಟೆಗೂ ಹೆಚ್ಚು ವಿಚಾರಣೆ ಮಾಡಿದ್ರು ಎಂದರು.

ಮತ್ತೆ ಕೆಲ ದಾಖಲೆಗಳೊಂದಿಗೆ ಬರೋಕೆ ಹೇಳಿದ್ದಾರೆ. ಯಾವತ್ತೂ ಬರಬೇಕು ಅನ್ನೋದನ್ನು ಇನ್ನೂ ಹೇಳಿಲ್ಲ. ಇವರಿಗಿಂತ ಸಿಬಿಐನವರೇ ಪರವಾಗಿಲ್ಲ, ಒಂದಿನೂ ಕರೆದಿಲ್ಲ, ಏನೂ ಕೇಳಿಲ್ಲ. ಇವರು ನೋಡಿದ್ರೆ‌ ಆಗಲೇ ಹಿಂಸೆ ಕೊಡೋಕೆ ಶುರು ಮಾಡಿದ್ದಾರೆ. ಯಾವೆಲ್ಲಾ ದಾಖಲೆಗಳು ಕೇಳಿದ್ದಾರೆ ಅನ್ನೋದನ್ನು ಹೇಳೋಕೆ ಆಗಲ್ಲ ಎಂದು ಡಿ.ಕೆ ಶಿವಕುಮಾರ್ ಅವರು ತಿಳಿಸಿದರು.

RELATED ARTICLES

Related Articles

TRENDING ARTICLES