Monday, December 23, 2024

National Film Award 2024: ಕೆಜಿಎಫ್​ 2 & ಕಾಂತಾರ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ (70th National Film Award 2024) ಕುರಿತು ದೆಹಲಿಯಲ್ಲಿ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆಯಿಂದ ಘೋಷಿಸಲಾಗಿದೆ. ಕನ್ನಡದ ‘ಕೆಜಿಎಫ್ 2’ (KGF 2) ಸಿನಿಮಾಗೆ 2 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ.

‘ಕೆಜಿಎಫ್‌ 2’ ಸಿನಿಮಾ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಮತ್ತು ಅತ್ಯುತ್ತಮ ಸಾಹಸ ನಿರ್ದೇಶನ (ಸ್ಟಂಟ್‌ ಕೊರಿಯೋಗ್ರಫಿ) ವಿಭಾಗಗಳಲ್ಲಿ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಕೆಜಿಎಫ್‌ 2  ಚಿತ್ರಕ್ಕೆ ಎರಡು ಪ್ರಶಸ್ತಿಗಳು ಲಭಿಸಿವೆ.

ಅಂದಹಾಗೆ, 2020ನೇ ವರ್ಷದಲ್ಲಿ ಸೆನ್ಸಾರ್ ಆದ ಸಿನಿಮಾಗಳಿಗೆ ಇಂದು (ಆ.16) ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿದೆ. ಕಾಂತಾರ ಸಿನಿಮಾ, ಕೆಜಿಎಫ್‌ 2 ಸಿನಿಮಾ, ಮಧ್ಯಂತರ ಎಂಬ ಚಿತ್ರ ಸೇರಿ ಒಟ್ಟು 6 ರಾಷ್ಟ್ರೀಯ ಪ್ರಶಸ್ತಿಗಳು ಬಾಚಿಕೊಂಡಿವೆ.

ರಿಷಭ್‌ ಶೆಟ್ಟಿ ಅಭಿನಯದ, ಹೊಂಬಾಳೆ ಫಿಲ್ಮ್‌ ನಿರ್ಮಿಸಿದ ಕಾಂತಾರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ದೆಹಲಿಯಲ್ಲಿ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (70th National Award 2024) ಇಂದು ಪ್ರಕಟಿಸಿತು. ಹೊಂಬಾಳೆ ಸಂಸ್ಥೆ ನಿರ್ಮಾಣದ ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’, ಮತ್ತು  ‘ಕಾಂತಾರ’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿಗೆ (Rishab Shetty) ಸಿಕ್ಕಿದೆ.

 

RELATED ARTICLES

Related Articles

TRENDING ARTICLES