Sunday, September 8, 2024

ಪಿಜಿಯಲ್ಲಿ ಯುವತಿ ಭೀಕರ ಹತ್ಯೆ ಪ್ರಕರಣ: ಆರೋಪಿ ಬಂಧನ

ಬೆಂಗಳೂರು: ಬೆಂಗಳೂರಿನ ಮಹಿಳಾ ಪಿಜಿಯಲ್ಲಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಮೂರು ದಿನಗಳ ಹಿಂದೆ ಕೋರಮಂಗಲದ ಮಹಿಳಾ ಪಿಜಿಯಲ್ಲಿ ಉತ್ತರ ಭಾರತ ಮೂಲದ ಕೃತಿ ಎಂಬಾಕೆಯನ್ನು ಬೀಕರವಾಗಿ ಇರಿದು ಹತ್ಯೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಪಿಜಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿ ಎಲ್ಲೆಡೆ ವೈರಲ್​ ಆಗಿತ್ತು.

ಇದನ್ನೂ ಓದಿ: ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಸಾಗಾಟ ಆರೋಪ: ಹಿಂದುಪರ ಕಾರ್ಯಕರ್ತರು ಆಕ್ರೋಶ

CCTV ದೃಷ್ಯಾವಳಿಗಳನ್ನು ಆಧರಿಸಿ, ಪೊಲೀಸರು ಭೂಪಾಲ್ ಮೂಲದ ಅಭಿಷೇಕ್ ಎಂಬಾತನನ್ನು ಬಂಧಿಸಿದ್ದಾರೆ. ಅಭಿಷೇಕ್ ಕೃತಿ ಕುಮಾರಿಯನ್ನು ಹತ್ಯೆ ಮಾಡಿದ ಬಳಿಕ ಬಟ್ಟೆ ಬದಲಾಯಿಸಿ ಪರಾರಿಯಾಗಿದ್ದ. ಆರೋಪಿಯ ಪತ್ತೆಗೆ ಪೊಲಿಸರು ಮೂರು ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಆರೋಪಿಯ ಮೊಬೈಲ್ ಲೊಕೇಶನ್ ಟ್ರೇಸ್​ ಮಾಡಿ, ಅವನನ್ನು ಪೊಲೀಸರು ಪತ್ತೆ ಹೆಚ್ಚಿದ್ದಾರೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES