Sunday, September 8, 2024

ಕರ್ನಾಟಕ- ಆಂಧ್ರ ಜನರ ಜೀವದಾತೆ ಈ ‘ತುಂಗಭದ್ರೆ’

ಭಾರತ ದೇಶ ಕರ್ನಾಟಕ ರಾಜ್ಯದಲ್ಲಿ ತುಂಗಭದ್ರಾ ಒಂದು ಪ್ರಖ್ಯಾತ ಮತ್ತು ವಿಶಿಷ್ಟವಾದ ನದಿ. ಒಂದು ಜನಪ್ರಿಯ ಗಾದೆ ಉಂಟು. “ಗಂಗಾ ಸ್ನಾನ ತುಂಗಾ ಪಾನ” ಅಂತ. ಅಂದರೆ, ತುಂಗಭದ್ರಾ ನದಿ ನೀರು ಅಷ್ಟು ಸಿಹಿ ಎಂದರ್ಥ. ಈ ನದಿಯ ಹನಿ ಹನಿಯಲ್ಲೂ ಪೌರುಷವಿದೆ ಎಂದು ವಿದೇಶಿ ಪ್ರವಾಸಿಗರು ಬರೆಯುತ್ತಾನೆ.

ದೇಶದಲ್ಲೇ ಯಾವ ನದಿಗೂ ಇರದ ಸುಳಿ, ಒಳ ಸುಳಿವು, ತುಂಗಭದ್ರಾ ಹರಿಯುವ ಕೆಲವು ಪ್ರದೇಶಗಳಲ್ಲಿ ತಳವೆ ಇಲ್ಲವೆಂಬುವುದು ವಿಶೇಷ ಮತ್ತು ಭಯಾನಕ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖ ಗಂಗಾಮೂಲ ಗ್ರಾಮ (ವರಾಹ ಪಾರ್ವತ)ದಲ್ಲಿ ಹುಟ್ಟಿದ ಎರಡು ಅವಳಿ ನದಿಗಳು. ಒಂದು ತುಂಗಾ ಇನ್ನೊಬ್ಬಳು ಭದ್ರಾ,  ಘಟ್ಟದಲ್ಲಿ ಎರಡು ಭಾಗದಂತೆ ಹರಿದು. ತುಂಗೆ, ಶೃಂಗೇರಿಯತ್ತ ಹರಿದರೆ ಭದ್ರಾ ಭದ್ರಾವತಿಯತ್ತ ಹರೆಯುತ್ತಾಳೆ ನಂತರ ಶಿವಮೊಗ್ಗದ ಕೂಡಲಿ ಬಳಿ ತುಂಗಾ ಮತ್ತು ಭದ್ರಾ ಸಂಗಮವಾಗಿ ತುಂಗಭದ್ರೆ ಆಗಿ, ದಾವಣಗೆರೆ, ಉಕ್ಕಡಗಾತ್ರಿ ಮುಖೇನ ಬಂದು ಹೊಸಪೇಟೆ (ವಿಜಯನಗರ ಜಿಲ್ಲೆ) ಸೇರುತ್ತಾಳೆ.

ಇದನ್ನೂ ಓದಿ: ಸಚಿವ ಭೈರತಿ ಸುರೇಶ್​ ಮುಡಾ ಸೈಟ್​ ಆರೋಪಕ್ಕೆ ಜಿಟಿ ದೇವೇಗೌಡ ಪ್ರತಿಕ್ರಿಯೆ

ಇವಳಿಗೊಂದು ಮುನಿರಾಬಾದ್ (ತುಂಗಾಭದ್ರಾ) ಜಲಾಶಯ ಕಟ್ಟಲಾಗಿದ್ದು, ಜಲಾಶಯದಿಂದ ಹೊರ ಬಂದ ನಂತರ ಇವಳು ಸ್ವಲ್ಪ ಉಗ್ರವಾಗುತ್ತಾಳೆ ನಂತರ ಹಂಪಿ ಹಲವಾರು ದೇವಸ್ಥಾನಗಳಿಗೆ ನಮಿಸಿ, ಕಿಶಕಿಂದೆ, ಗಂಗಾವತಿ, ಮಾನ್ವಿ ಸಿಂಧನೂರು, ರಾಯಚೂರು, ಜನರಿಗೆ ಜೀವ ಜಲವಾಗಿ ಹರಿದು ಆಂಧ್ರದತ್ತ ಪಯಣ ಮಾಡುತ್ತಾಳೆ. ತೆಲಂಗಾಣ. ರಾಯಲಸೀಮಾ, ಮಂತ್ರಾಲಯದಲ್ಲಿ ಗುರುರಾಯರಿಗೆ ದರ್ಶನ ಕೊಟ್ಟು. ಆದೋನಿ, ಬಳ್ಳಾರಿಯ ಮೂಲಕವಾಗಿ ಕಣೆಕಲ್ ಮಾರ್ಗವಾಗಿ ಅನಂತಪುರ ಜಿಲ್ಲೆಗೆ ಕರ್ನೋಲ್. ಪ್ರಾಂತಾದವರಿಗೂ, ಜೀವನದಿಯಾಗಿ ಹರಿದು ಹರೆಸಿ ಆಶೀರ್ವದಿಸಿ. ಅನ್ನದಾತೆಯಾಗಿ, ತೆಲಂಗಾಣದ ಕೃಷ್ಣೆಯಲ್ಲಿ ವಿಲೀನಳಾಗಿ ಕೃಷ್ಣೆಯೊಡನೆ ಸೇರಿ ಸಂಭ್ರಮಿಸಿ ಕೊನೆಗೆ ಬಂಗಾಳ ಕೊಲ್ಲಿ ಸಮುದ್ರವನ್ನು ಸೇರುತ್ತಾಳೆ. (ಶ್ರೀಕಾಕುಳಂ) ಆಂಧ್ರ. ಇವಳೇ ಧನ್ಯ ಎಲ್ಲೊ ಹುಟ್ಟಿ. ಎಷ್ಟೋ ಜನರ. ಜೀವನಕ್ಕೆ ಬೆಳಕಾಗಿ, ಅನ್ನದಾತೆಯಾಗಿ ನಮ್ಮ ಜೀವ ನದಿ ಜೀವನಾಡಿ ತುಂಗಭದ್ರಾ.

ತುಂಗಭದ್ರಾ ಪುರಾಣದ ಹಿನ್ನೆಲೆ ಗಂಗಾಮೂಲ ಕುದುರೆಮುಖ ಪುರಾಣದ ಕಾಲದಲ್ಲಿ ವರಾಹ ಸ್ವಾಮಿ ವಿಶ್ರಾಂತಿ ಪಡೆದ ಸ್ಥಳ ವರಾಹ ಸ್ವಾಮಿಯ ಎರಡು ಕೋರೆ ಹಲ್ಲಿನಿಂದ ಹುಟ್ಟುದವಳೇ ಈ ತುಂಗಭದ್ರಾ, ಬಲ ಕೋರೆ ಇಂದ ತುಂಗ ಎಡ ಕೋರೆಯಿಂದ ಭದ್ರಾ ಮತ್ತು ಕಣ್ಣ ಹನಿಯಿಂದ ನೇತ್ರಾವತಿಯು ಉಗಮವಾಗಿದೆ ಎಂದು ಪುರಾಣದಲ್ಲಿ ಉಲ್ಲೇಖವಿದ್ದು, ತುಂಗಭದ್ರಾ ವರಹನಾ ಕೊರೆಯಿಂದ ಬಂದಿದಕ್ಕೆ ತುಂಗಭದ್ರೆಗೆ, ವರಹಜಾ ತುಂಗಭದ್ರಾ ಎಂದು ಕರೆಯುತ್ತಾರೆ.

RELATED ARTICLES

Related Articles

TRENDING ARTICLES