Sunday, September 8, 2024

ಮತ್ತೆ ಜಿಲ್ಲೆ ಹೆಸರು ಬದಲಾವಣೆ ಮಾಡೋಕೆ ಹೆಚ್ಡಿಕೆ ಹಣೆಲೂ ಬರೆದಿಲ್ಲ: ಡಿ.ಕೆ ಶಿವಕುಮಾರ್

ಬೆಂಗಳೂರು: ಹೆಚ್.ಡಿ ಕುಮಾರಸ್ವಾಮಿ ಯಾವಾಗಲೂ ನನ್ನ ಸರ್ವನಾಶ ಮಾಡಲು ಬಯಸ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿಂದು ರಾಮನಗರ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕುಮಾರಸ್ವಾಮಿ ಯಾವಾಗಲೂ ನನ್ನ ಸರ್ವನಾಶ ಮಾಡಲು ಬಯಸ್ತಾರೆ. ಪ್ರತೀ ದಿನ ರಾಜಕಾರಣ, ಮಲಗಿದ್ದು ಎಲ್ಲಾ ಹೇಳ್ತಾರೆ. ಸರ್ವ ನಾಶವನ್ನೇ ಬಯಸಿಕೊಂಡು ಬಂದಿದ್ದಾರೆ ಎಂದರು.

ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್​ ಕೌಂಟರ್​ ಯಾತ್ರೆ ರದ್ದು: ಡಿಕೆ ಶಿವಕುಮಾರ್ ಸ್ಪಷ್ಟನೆ

ಹೆಚ್ಡಿಕೆ ಆಚಾರ, ವಿಚಾರ ಎಲ್ಲಾ ಅರಿವಿದೆ. ರಾಮನಗರ ಟಚ್ ಮಾಡ್ತಿಲ್ಲ. ಅದು ಅಲ್ಲೇ ಇರಲಿದೆ. ಅವರು ರಾಮನಗರಕ್ಕೆ ಬಂದು ಅಕ್ರಮ‌ ಮಾಡಲು ಪ್ರಯತ್ನ ಮಾಡಿದ್ರು. ರಾಮನಗರ, ಚನ್ನಪಟ್ಟಣ, ಮಾಗಡಿ ಎಲ್ಲರೂ ನಮ್ಮವರು. ಕೆಂಗಲ್ ಹನುಮಂತಯ್ಯ ಬೆಂಗಳೂರಿಗೆ ಬಂದ್ರು ವಿಧಾನಸೌಧ ಕಟ್ಟಿದ್ರು. ದೇವೇಗೌಡರು ಬಂದುದ್ದು ಬೆಂಗಳೂರಿಗೆ. ಕುಮಾರಸ್ವಾಮಿ ಬಂದಿದ್ದು ಬೆಂಗಳೂರಿಗೆ. ನಮ್ಮ ಹಿರಿಯರು ಇಟ್ಟಿದ್ದ ಹೆಸರು ಇರಬೇಕು. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಹೆಸರಿಡಲಾಗಿದೆ ಎಂದು ಜಿಲ್ಲೆಯ ಮರುನಾಮಕರಣವನ್ನು ಸಮರ್ಥನೆ ಮಾಡಿಕೊಂಡರು.

ಹೆಚ್ಡಿಕೆ ಹೇಳಿಕೆ ಡಿಕೆಶಿ ಡಿಚ್ಚಿ:

2028ರ ಒಳಗೆ ಮತ್ತೆ ಜಿಲ್ಲೆಯ ಹೆಸರು ರಾಮನಗರ ಎಂದು ಆಗಲಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ನಿನ್ನೆ ಮಾಧ್ಯಮ ಮುಂದೆ ಹೇಳಿದ್ದರು. ಈ ಸಂಬಂಧ ಮಾತಾಡಿದ ಡಿ.ಕೆ ಶಿವಕುಮಾರ್ ಅವರು, ಮತ್ತೆ ಹೆಸರು ಬದಲಾವಣೆ ಮಾಡೋಕೆ ಅವರ ಹಣೆಯಲ್ಲೂ ಬರೆದಿಲ್ಲ. ನೀವು (ಮಾಧ್ಯಮ) ಬರೆದಿಟ್ಕೊಳ್ಳಿ ದಾಖಲೆ ಬೇಕಾಗುತ್ತೆ. 2028ಕ್ಕೆ ಇದೇ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಹೆಚ್ಡಿಕೆಗೆ ಡಿಕೆಶಿ ಬಹಿರಂಗವಾಗಿ ಸವಾಲ್​ ಹಾಕಿದ್ದಾರೆ.

RELATED ARTICLES

Related Articles

TRENDING ARTICLES