Sunday, September 8, 2024

ಅಬ್ದುಲ್​ ರಜಾಕ್​ 15 ವರ್ಷಗಳಿಂದ ಜನರಿಗೆ ನಾಯಿ ಮಾಂಸ ತಿನ್ನುಸುತ್ತಿದ್ದಾನೆ: ಪ್ರಮೋದ್​ ಮುತಾಲಿಕ್​ ಆರೋಪ

ಗದಗ: ಕಳೆದ 15 ವರ್ಷಗಳಿಂದ ಅಬ್ದುಲ್​ ರಜಾಕ್​ ಬೆಂಗಳೂರಿನ ಜನತೆಗೆ ಕುರಿ ಮಾಂಸದ ಹೆಸರಿನಲ್ಲಿ ನಾಯಿ ಮಾಂಸ ತಿನ್ನಿಸುತ್ತಿದ್ದಾನೆ ಎಂದು ಶ್ರೀರಾಮ ಸೇಬೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಕಿಡಿಕಾರಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರೈಲ್ವೆ ಸ್ಟೇಷನ್‌ನಲ್ಲಿ 90 ಮಾಂಸದ ಬಾಕ್ಸ್‌ಗಳು ಸಿಕ್ಕಿವೆ. ಅವು ನಾಯಿ ಮಾಂಸ ಇರುವ ಬಾಕ್ಸ್‌ಗಳು. ಕಳೆದ 15 ವರ್ಷದಿಂದ ಅಬ್ದುಲ್ ರಜಾಕ್ ನಾಯಿ ಮಾಂಸ ತಿನ್ನಿಸುತ್ತಿದ್ದಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ ಬಿಬಿಎಂಪಿಯ ಅಧ್ಯಕ್ಷರು ಕತ್ತೆ ಕಾಯುತ್ತಿದ್ದಾರಾ? ಅಬ್ದುಲ್ ರಜಾಕ್ ದೇಶದ್ರೋಹಿ ಕೆಲಸ ಮಾಡುತ್ತಿದ್ದಾನೆ. ರಾಜಸ್ಥಾನದಿಂದ ನಾಯಿ ಮಾಂಸ ತರಿಸಿ ಮಾರುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಪುನೀತ್ ಕೆರೆಹಳ್ಳಿ ಬಂಧನ

ಅಬ್ದುಲ್ ರಜಾಕ್ ಬೆನ್ನಿಗೆ ಸಚಿವ ಜಮೀರ್ ಅಹ್ಮದ್ ನಿಂತಿದ್ದಾರೆ. ಇದಕ್ಕೆ ಜಮೀರ್ ಅಹ್ಮದ್ ಉತ್ತರ ಕೊಡಬೇಕು. ಹಿಂದೂಗಳು ಈಗಲಾದರೂ ಎಚ್ಚರಗೊಳ್ಳಬೇಕು. ನಾಯಿ ಮಾಂಸದ ಬಾಕ್ಸ್ ಮೇಲೆ ಮೀನಿನ ಮಾಂಸ ಎಂದು ಬರೆದು ಮೋಸ ಮಾಡುತ್ತಿದ್ದಾರೆ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದಿದ್ದಾರೆ.

RELATED ARTICLES

Related Articles

TRENDING ARTICLES