Sunday, September 8, 2024

ಕಾಮಗಾರಿ ಬಿಲ್ ಗಾಗಿ ಪಂಚಾಯ್ತಿ ಕಚೇರಿಯಲ್ಲಿ ಮಲಗಿ ಸದಸ್ಯನ ವಿನೂತನ ಪ್ರತಿಭಟನೆ

ವಿಜಯನಗರ: ಕಾಮಗಾರಿ ಬಿಲ್​ ಬಿಡುಗಡೆ ಮಾಡದ ಪಂಚಾಯ್ತಿ ವಿರುದ್ದವೆ ಸಿಡಿದೆದ್ದ ಗ್ರಾಮ ಪಂಚಾಯ್ತಿ ಸದಸ್ಯ, ಪಂಚಾಯ್ತಿ ಕಚೇರಿಯಲ್ಲಿಯೇ ಮಲಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ವಿಜಯನಗರದ ಕೊಟ್ಟೂರು ತಾಲ್ಲೂಕಿನ ಉಜ್ಜಿನಿ ಗ್ರಾಮ ಪಂಚಾಯ್ತಿಯ ಭೈರದೇವರಗುಡ್ಡದ ಗ್ರಾ.ಪ.ಸದಸ್ಯ ಚಂದ್ರಪ್ಪ, ಅನಾರೋಗ್ಯದ ಕಾರಣ ಆಸ್ಪತ್ರೆಯ ಖರ್ಚಿಗೂ ಹಣವಿಲ್ಲ ಎಂದು ಗ್ರಾಮ ಪಂಚಾಯ್ತಿ ಕಚೇರಿಯಲ್ಲಿಯೇ ಮಲಗಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಅಬ್ದುಲ್​ ರಜಾಕ್​ 15 ವರ್ಷಗಳಿಂದ ಜನರಿಗೆ ನಾಯಿ ಮಾಂಸ ತಿನ್ನುಸುತ್ತಿದ್ದಾನೆ: ಪ್ರಮೋದ್​ ಮುತಾಲಿಕ್​ ಆರೋಪ

ಗ್ರಾಮದಲ್ಲಿ ಪೈಪ್ ಲೈನ್ ಕಾಮಗಾರಿ ಮಾಡಿಸಿ ಹಲವು ದಿನಗಳು ಕಳೆದರೂ ಪಿಡಿಓ ಬಿಲ್​ ಬಿಡುಗಡೆ ಮಾಡಿರಲಿಲ್ಲ, ಇದರಿಂದ ಬಿಲ್​ ಪಾವತಿ ಮಾಡುವವರೆಗೂ ಪಂಚಾಯ್ತಿ ಕಚೇರಿಯಲ್ಲಿ ಮಲಗಿ ಪ್ರತಿಭಟನೆ ನಡೆಸುತ್ತೇನೆ ಎಂದು ಅನಾರೋಗ್ಯದ ನಡುವೆಯೂ ಪಂಚಾಯ್ತಿ ಸದಸ್ಯ ಚಂದ್ರಪ್ಪ ಮಂಚಾಯ್ತಿ ಕಚೇರಿಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ.

ಚಂದ್ರಪ್ಪ ಚಳಿ ಜ್ವರದಿಂದ ಪಂಚಾಯ್ತಿಯಲ್ಲಿ ಮಲಗಿದ್ರೂ PDO ಮಾತ್ರ ಡೋಂಟ್​ ಕೇರ್​ ಎನ್ನುತ್ತಿದ್ದಾರೆ. ಈ ನಡುವೆ ಬಿಲ್ ನ ಹಣ ಕೊಡುವವರೆಗೂ ಇಲ್ಲೆ ಮಲಗ್ತಿನಿ ಎಂದು ಪಟ್ಟು ಹಿಡಿದ ಚಂದ್ರಪ್ಪ ಆಸ್ಪತ್ರೆಗೆ ಹೋಗದೇ ಕಚೇರಿಯಲ್ಲಿ ಮಲಗಿ ಪ್ರತಿಭಟಿಸುತ್ತಿದ್ದಾರೆ. ಪಿಡಿಓ ಅಧಿಕಾರಿಯ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES