Sunday, September 8, 2024

ಸಂಪೂರ್ಣ ಭರ್ತಿಯಾದ KRS: ಭಾರಿ ಪ್ರಮಾಣದಲ್ಲಿ ನೀರು ಹೊರಕ್ಕೆ

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದಲ್ಲಿ ಸಧ್ಯ 124.35 ಅಡಿ ನೀರು ಸಂಗ್ರಹವಾಗಿದೆ. ಕೆಆರ್ ಎಸ್ ಜಲಾಶಯವು 124.80 ಅಡಿ ಸಾಮರ್ಥ್ಯ ಹೊಂದಿದೆ.

ಅಣೆಕಟ್ಟೆಗೆ 66,945 ಕ್ಯೂಸೆಕ್ ಒಳಹರಿವು ಇದೆ. ಹಾಗಾಗಿ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಇಂದಿನಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲು ಜಲಸಂಪನ್ಮೂಲ ಇಲಾಖೆ ನಿರ್ಧರಿಸಿದೆ. ಪ್ರಸಕ್ತ 74,021 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಗೆ ಬಿಡುತ್ತಿರುವುದರಿಂದ ಕಾವೇರಿ ನದಿ ಪಾತ್ರದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಕಾವೇರಿ ನೀರಾವರಿ ನಿಗಮ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ದರ್ಶನ್​​​​ಗಾಗಿ ಕೊಲ್ಲೂರು ಮೂಕಾಂಬಿಕ ದೇವಾಲಯದಲ್ಲಿ ಪತ್ನಿಯಿಂದ ಹೋಮ

ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿ:

ಮಲೆನಾಡು ಭಾಗದಲ್ಲಿ ಅತಿಹೆಚ್ಚು ಮಳೆ ಹಿನ್ನಲೆ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಇನ್ನು
ತುಂಗಭದ್ರಾ ಜಲಾಶಯ ನದಿ ತೀರದ ಜನ್ರಿಗೆ ಪ್ರವಾಹದ ಭೀತಿ ಎದುರಾಗಿದೆ. ಜಲಾಶಯದಿಂದ 30 ಕ್ರಸ್ಟ್‌ ಗೇಟಗಳ ಮೂಲಕ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ. ಭಾರಿ ನೀರಿನಿಂದ ವಿಜಯನಗರ ಸಾಮ್ರಾಜ್ಯದ ಹಲವಾರು ಸ್ಮಾರಕಗಳು ಮುಳುಗಡೆಯಾಗಿದೆ.

ಆನೆಗೊಂದಿ ಬಳಿ ಇರೋ ಕೃಷ್ಣದೇವರಾಯ ಸಮಾಧಿ ಮಂಟಪ ಮುಳುಗಡೆಯಾಗಿದೆ. ಒಳಹರಿವು ಹೆಚ್ಚಾದಂತೆ ಟಿಬಿ ಬೋರ್ಡ್‌ ನೀರು ಬಿಡುಗಡೆ ಮಾಡುತ್ತಿದೆ. ಇನ್ನು ಮಲೆನಾಡಿನ ಭಾಗದಲ್ಲಿ ಹೆಚ್ಚು ಮಳೆಯಾದ್ರೆ, ಈ ಭಾಗದ ಜನ್ರಿಗೆ ಇನ್ನಷ್ಟು ಆತಂಕ ಇದೆ.

ಇದನ್ನೂ ಓದಿ: ದರ್ಶನ್​ ಭೇಟಿ ಬೆನ್ನಲ್ಲೇ ನಟ ವಿನೋದ್​ ರಾಜ್​ ಇಂದು ರೇಣುಕಾಸ್ವಾಮಿ ಕುಟುಂಬಸ್ಥರ ಭೇಟಿ

ಹಾಸನ ಜಿಲ್ಲೆಯಲ್ಲಿ ವರುಣಾರ್ಭಟ: ಶಾಲಾಕಾಲೇಜುಗಳಿಗೆ ರಚನೆ:

ಹಾಸನ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದೆ. ಗೊರೂರು ಜಲಾಶಯದಿಂದ ಹೇಮಾವತಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನಲೆ ಹೊಳೆನರಸೀಪುರ-ಅರಕಲಗೂಡು ರಸ್ತೆ ಜಲಾವೃತವಾಗಿದೆ. ಹೊಳೆನರಸೀಪುರ ಪಟ್ಟಣದ ಅರಕಲಗೂಡು ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಗೂ ನೀರು ನುಗ್ಗಿದೆ. ನೀರು ಹೊರಹಾಕಲು ಅಗ್ನಿಶಾಮಕ ದಳದ ಸಿಬ್ಬಂದಿ ಪರದಾಡುವಂತಾಗಿದೆ. ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಖಾಸಗಿ ಶಾಲೆಗೂ ನೀರು ನುಗ್ಗಿದೆ.

ಮತ್ತೊಂದೆಡೆ ಬಾರಿ ನೀರು ನುಗ್ಗಿದ್ದರಿಂದ ಹೆದ್ದಾರಿಗಳು ಜಲಾವೃತಗೊಂಡಿವೆ.ಹೊಳೆನರಸೀಪುರ-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಯಲ್ಲಿಅಪಾರ ಪ್ರಮಾಣದ ನೀರು ನಿಂತಿದ್ದು,ನೀರಿನಲ್ಲೇ ವಾಹನಗಳು ಸಂಚರಿಸುತ್ತಿವೆ.ಹೇಮಾವತಿ ಜಲಾಶಯದಿಂದ ಮತ್ತಷ್ಟು ಪ್ರಮಾಣದ ನೀರು ಬಿಡುಗಡೆಯಾದರೆ ರಸ್ತೆ ಸಂಪರ್ಕ ಬಂದ್ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಇಂದು ಹೊಳೆನರಸೀಪುರ ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

RELATED ARTICLES

Related Articles

TRENDING ARTICLES