Sunday, September 8, 2024

ನಿಮಿಷಾಂಭ ದೇಗುಲದ ಸ್ನಾನ ಗೃಹ ಜಲಾವೃತ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ KRS ಜಲಾಶಯ ಭರ್ತಿಯಾದ ಹಿನ್ನೆಲೆ ಕಾವೇರಿ ನದಿಗೆ 74 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಕಾವೇರಿ ನೀರಿನ ಮಟ್ಟ ಏರಿಕೆಯಾಗಿದ್ದು, ನಿಮಿಷಾಂಭ ದೇಗುಲದ ಬಳಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಿಮಿಷಾಂಭ ದೇಗುಲದಲ್ಲಿ ಭಕ್ತರ ಸ್ನಾನ ಗೃಹ ಜಲಾವೃತವಾಗಿದೆ. ಪ್ರವಾಹದ ಹಿನ್ನೆಲೆ ಕಾವೇರಿ ನದಿಗೆ ಇಳಿಯದಂತೆ ಭಕ್ತರಿಗೆ ಮಂಡ್ಯ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ದೇವಸ್ಥಾನದ ಬಳಿಯ ಸ್ನಾನ ಘಟ್ಟಕ್ಕೆ ತೆರಳದಂತೆ ಭಕ್ತರಿಗೆ ನಿರ್ಬಂಧ ವಿಧಿಸಿ ಬ್ಯಾರಿಕೇಡ್​ಗಳನ್ನ ಹಾಕಲಾಗಿದೆ.

ಇದನ್ನೂ ಓದಿ: ಗಂಗಾವತಿ-ಕಂಪ್ಲಿ ಸೇತುವೆ ಸಂಚಾರ ನಿಷೇಧ

ಸ್ಮಶಾನ ಜಲಾವೃತ; ಮೃತದೇಹ ಹೊತ್ತು ಶವಸಂಸ್ಕಾರ:

ತುಂಗಭದ್ರ ನದಿ ಪ್ರವಾಹ ಪರಿಸ್ಥಿತಿಯಿಂದ ಸ್ಮಶಾನ ಜಲಾವೃತವಾಗಿದ್ದು, ನದಿಯಲ್ಲಿ ಮೃತದೇಹ ಹೊತ್ತು ಶವಸಂಸ್ಕಾರ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದ ಗುತ್ತೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ದಲಿತರು ಸತ್ತರೆ ಶವಸಂಸ್ಕಾರಕ್ಕೂ ಸ್ಥಳವಿಲ್ಲ. ಗುತ್ತೂರು ಗ್ರಾಮದ HMC ಮಂಜಪ್ಪ ಸಾವನ್ನಪ್ಪಿದ್ದರು. ನದಿ ದಡವೇ ಸ್ಮಶಾನವಾದ ಹಿನ್ನೆಲೆ ಸಂಬಂಧಿಕರು ಶವಸಂಸ್ಕಾರಕ್ಕೆ‌ ಪರದಾಡಿದ್ದಾರೆ.

ಹತ್ತಾರು ವರ್ಷಗಳಿಂದ ದಲಿತ ಕುಟುಂಬಗಳು ಸ್ಮಶಾನಕ್ಕಾಗಿ ಸ್ಥಳ ಕೇಳುತ್ತಿದ್ದು, ಗುತ್ತೂರು ಗ್ರಾಮಸ್ಥರ ಸಮಸ್ಯೆಗೆ ಜಿಲ್ಲಾಡಳಿತ ಕ್ಯಾರೆ ಎನ್ನುತ್ತಿಲ್ಲ. ಜಲಾವೃತವಾದ ಸ್ಮಶಾನದಲ್ಲಿಯೇ ತೆರಳಿ ಗ್ರಾಮಸ್ಥರು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.

RELATED ARTICLES

Related Articles

TRENDING ARTICLES