Saturday, September 7, 2024

ಕನ್ನಡಿಗರಿಗೆ ಮೀಸಲಾತಿ ವಿರೋಧ: ಬಯೋಕಾನ್‌ಗೆ ತಟ್ಟಿದ ಬಾಯ್ಕಾಟ್ ಬಿಸಿ

ಬೆಂಗಳೂರು: ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಚಾರವಾಗಿ ಉದ್ಯಮಿಗಳಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ, ಸಮೀರ್ ನಿಗಮ್ ಮುಂತಾದವರು ವಿರೋಧ ವ್ಯಕ್ತಪಡಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಕನ್ನಡ ಪರ ಹೋರಾಟಗಾರರು ಬೆಂಗಳೂರಿನಲ್ಲಿರುವ ಕಿರಣ್ ಮಜುಂದಾರ್ ಶಾ ಅಧ್ಯಕ್ಷತೆಯ ಬಯೋಕಾನ್ ಲಿಮಿಟೆಡ್ ಕಂಪನಿಯ ಹೆಸರಿಗೆ ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Boycott Phonepe: ಫೋನ್​ ಪೇ ವಿರುದ್ದ ಕನ್ನಡಿಗರು ಆಕ್ರೋಶ

ಈಚೆಗೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಚಾರವಾಗಿ ಕಾಮೆಂಟ್ ಮಾಡಿದ್ದ ಫೋನ್ ಪೇ ಸಿಇಒ ಸಮೀರ್ ನಿಗಮ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ #boycottphonepe, #uninstallPhonepe ಎನ್ನುವ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಸೃಷ್ಟಿಯಾಗಿತ್ತು.

‘ಕನ್ನಡಿಗರ ವಿರುದ್ಧವಾಗಿ ಮಾತನಾಡಿದ ಫೋನ್ ಪೇ CEOಗೆ ಬುದ್ದಿ ಕಲಿಸಬೇಕಿದೆ. ಫೋನ್ ಪೇಗೆ 1 ರೇಟಿಂಗ್ ನೀಡಿ ಮೊಬೈಲ್‌ನಿಂದ ಆ್ಯಪ್‌ ಡಿಲೀಟ್ ಮಾಡಿ’ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಉದ್ಯೋಗದಲ್ಲಿ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಡೆಗೆ ಉದ್ಯಮ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಈ ಅಧಿವೇಶನದಲ್ಲಿ ಮಂಡಿಸಲು ಸಿದ್ದಪಡಿಸಿದ್ದ ಮಸೂದೆಯನ್ನು ತಕ್ಷಣಕ್ಕೆ ತಡೆ ಹಿಡಿಯಲಾಗಿದೆ. ‘ಮಸೂದೆ ಇನ್ನೂ ಸಿದ್ದತೆಯ ಹಂತದಲ್ಲಿದೆ. ಮಸೂದೆ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

RELATED ARTICLES

Related Articles

TRENDING ARTICLES