Saturday, September 7, 2024

ವಿಜಯಲಕ್ಷ್ಮಿ ಭೇಟಿ ಬಳಿಕ DCM ಡಿಕೆ ಶಿವಕುಮಾರ್​ ಪ್ರತಿಕ್ರಿಯೆ!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಹಾಗೂ ಇತರರ ಮೇಲೆ ಚಾರ್ಜ್ ಶೀಟ್ ರೆಡಿಯಾಗುತ್ತಿರುವ ಸಮಯದಲ್ಲಿ ದರ್ಶನ್​ರ ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ಸಹೋದರ ದಿನಕರ್ ಇಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಈ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಸುಮಾರು 20 ನಿಮಿಷಗಳ ಕಾಲ ಡಿಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿದ ವಿಜಯಲಕ್ಷ್ಮಿ ಮತ್ತು ದಿನಕರ್, ಡಿಸಿಎಂ ನಿವಾಸದಿಂದ ತೆರಳಿದರು. ಬಳಿಕ ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ವಿಜಯಲಕ್ಷ್ಮಿ ಅವರು ಆಗಮಿಸಿದ ಉದ್ದೇಶ ತಿಳಿಸಿದರು. ಜೊತೆಗೆ ದರ್ಶನ್ ಪ್ರಕರಣದ ಬಗ್ಗೆಯೂ ಮಾತನಾಡಿದರು.

ಮೊನ್ನೆ ಕಾರ್ಯಕ್ರಮವೊಂದರಲ್ಲಿದ್ದಾಗ ನನ್ನನ್ನು ಭೇಟಿಯಾಗಲು ಬಂದಿದ್ದರು ಆದರೇ ಅಲ್ಲಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಇಂದು ಬೆಳಗ್ಗೆ ಮನೆಗೆ ಬರುವಂತೆ ಸಮಯ ನೀಡಿದ್ದೆ ಬಂದಿದ್ದರು. ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಯಿತು.

ಇದನ್ನೂ ಓದಿ: ನಟ ದರ್ಶನ್​ ಭೇಟಿಗೆ ಬಂದ ಖ್ಯಾತ ಹಾಸ್ಯನಟ ಸಾಧು ಕೋಕಿಲ: ಅವಕಾಶ ಸಿಗದೇ ವಾಪಾಸ್​

ವಿಜಯಲಕ್ಷ್ಮಿ ತಮ್ಮ ಮಗನನ್ನು ನಮ್ಮ ಶಾಲೆಯಲ್ಲಿ ಸೇರಿಸಲು ಕೇಳಿಕೊಳ್ಳುಲು ಬಂದಿದ್ದರು, ಈ ಹಿಂದೆ ಅವರ ಮಗ ನಮ್ಮ ಶಾಲೆಯಲ್ಲಿಯೇ ಓದುತ್ತಿದ್ದ, ಕಾರಣಾಂತರಗಳಿಂದ ಬೇರೆ ಕಡೆಗೆ ಸೇರಿಸಿದ್ದರು. ಇದೀಗ ಮತ್ತೆ ಶಾಲೆಯಲ್ಲಿ ಅಡ್ಮಿಷನ್​ ಮಾಡಿಸುವ ಕುರಿತು ಕೇಳಲು ಬಂದಿದ್ದಾರೆ. ನಮ್ಮ ಶಾಲೆಯ ಪ್ರಿನ್ಸಿಪಾಲ್​ ಇದಕ್ಕೆ ಒಪ್ಪಿಲ್ಲ ಅನ್ಸುತ್ತೆ ಅದಿಕ್ಕೆ ಅವರು ನನ್ನನ್ನು ಭೇಟಿಯಾಗಿ ಮಾತನಾಡಲು ಬಂದಿದ್ದರು.

ಇದೇ ವೇಳೇ ದರ್ಶನ್​ ಬಗ್ಗೆ ಮಾತನಾಡಿದ ಅವರು, ಇಂದು ನಮ್ಮ ಮನೆಗೆ ಬಂದ ದರ್ಶನ್​ ಪತ್ನಿ ಅವರು ದರ್ಶನ್​ ಪ್ರಕರಣದ ಬಗ್ಗೆ ಮಾತನಾಡಲು ಬರುತ್ತಿದ್ದಾರೆ ಎಂದುಕೊಂಡೆ. ಆದರೇ, ಆ ವಿಚಾರಕ್ಕೆ ಅವರು ಬಂದಿರಲಿಲ್ಲ. ಬದಲಿಗೆ ಮಗನನ್ನು ನಮ್ಮ ಶಾಲೆ ಅಡ್ಮಿಷನ್​ ಮಾಡಿಸಲು ಕೇಳಿಕೊಳ್ಳಲು ಬಂದಿದ್ದರು. ನಾನು ಪ್ರಿನ್ಸಿಪಾಲ್​ ಬಳಿ ಮಾತನಾಡುತ್ತೇನೆ ಎಂದು ಹೇಳಿದ್ದೇನೆ.

ಇನ್ನು ಪ್ರಕರಣದಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಸದ್ಯ ಪ್ರಕರಣದ ನ್ಯಾಯಾಲಯದಲ್ಲಿದೆ, ಈಗ ಏನು ಮಾಡಲು ಆಗುವುದಿಲ್ಲ, ಪೊಲೀಸ್ ವಿಚಾರಣೆಯಲ್ಲಿಯೂ ನಾವು ತಲೆತೂರಿಸಲು ಆಗುವುದಿಲ್ಲ ಎಂದರು.

RELATED ARTICLES

Related Articles

TRENDING ARTICLES