Saturday, September 7, 2024

ನೀತಿ ಆಯೋಗದ ಸಭೆಗೆ NDAಯೇತರ ರಾಜ್ಯಗಳ ಸಿಎಂ ಬಹಿಷ್ಕಾರ

ದೆಹಲಿ: ಕೇಂದ್ರ ಸರ್ಕಾರದ 2024-25ನೇ ಆರ್ಥಿಕ ವರ್ಷದ ಬಜೆಟ್ ಮಂಡನೆಯಾಗಿದೆ. ಬಜೆಟ್​​ನಲ್ಲಿ ಮೋದಿ 3.0 ಸರ್ಕಾರ ಕೇವಲ ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಸಿಂಹಪಾಲು ನೀಡಿದೆ. ಬೇರೆಲ್ಲಾ ರಾಜ್ಯಗಳನ್ನು ಅದರಲ್ಲೂ ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳನ್ನು ಕಡೆಗಣಿಸಿದ ಆರೋಪ ಕೇಳಿಬಂದಿದೆ. ಹೀಗಾಗಿ ಜುಲೈ 27 ರಂದು ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ವಿಪಕ್ಷದ ರಾಜ್ಯಗಳ ಮುಖ್ಯಮಂತ್ರಿಗಳು ಒಕ್ಕೊರಲಿನಿಂದ ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಬಜೆಟ್​ನಲ್ಲಿ ರಾಜ್ಯಗಳಿಗೆ ತಾರತಮ್ಯ: ಸಂಸತ್​ ಮುಂದೆ ಪ್ರತಿಭಟನೆ

ಮಂಗಳವಾರ ಸಂಜೆ ಇಂಡಿಯಾ ಬ್ಲಾಕ್ ಮೈತ್ರಿಕೂಟದ ಸಭೆ ದೆಹಲಿಯಲ್ಲಿ ನಡೆದಿತ್ತು. ಅದರಲ್ಲಿ ನೀತಿ ಆಯೋಗ ಸಭೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಟಿಎಂಸಿ ನಾಯಕರಾದ ಡೆರೆಕ್ ಒಬ್ರಿಯನ್, ಕಲ್ಯಾಣ್ ಬ್ಯಾನರ್ಜಿ, ಆಪ್ ನಾಯಕ ಸಂಜಯ್ ಸಿಂಗ್, ಸಿಪಿಐ ನಾಯಕ ಪಿ ಸಂತೋಷ್ ಕುಮಾರ್, ಸಿಪಿಎಂನ ಕೆ ರಾಧಾಕೃಷ್ಣನ್ ಹಾಗೂ ಇತರರು ಉಪಸ್ಥಿತರಿದ್ದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಂಸತ್​ನಲ್ಲಿ ಬಜೆಟ್​ ಮಂಡಿಸಿದ್ದು, ಈ ಬಜೆಟ್​ನಲ್ಲಿ NDA ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗಷ್ಟೆ ವಿಶೇಷ ಅನುದಾನ ಮತ್ತು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಈ ಬಜೆಟ್​ಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದೆ.

RELATED ARTICLES

Related Articles

TRENDING ARTICLES