Saturday, September 7, 2024

ಸಾರಿಗೆ ಇಲಾಖೆಗೆ ಸರ್ಕಾರ 1413 ಕೋಟಿ ರೂ. ಬಾಕಿ ಇದೆ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜ್ಯ ಸರ್ಕಾರ ಮಹತ್ವದ ಯೋಜನೆಗಳಲ್ಲಿ ಒಂದಾದ ಸಾರಿಗೆ ಇಲಾಖೆಗೆ ಶಕ್ತಿ ಯೋಜನೆಯಡಿ 1,413 ಕೋಟಿ ರೂ. ಬಾಕಿ ಹಣ ಕೊಡಬೇಕು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

ಇದನ್ನೂ ಓದಿ: ವಿಜಯಲಕ್ಷ್ಮಿ ಭೇಟಿ ಬಳಿಕ DCM ಡಿಕೆ ಶಿವಕುಮಾರ್​ ಪ್ರತಿಕ್ರಿಯೆ!

ಇಂದಿನ ವಿಧಾನ ಪರಿಷತ್ ‌ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಪ್ರಶ್ನೆ ಕೇಳಿದರು. ಶಕ್ತಿ ಯೋಜನೆಗೆ ಸರ್ಕಾರ ಬಜೆಟ್‌ನಲ್ಲಿ ಹಣ ಸರಿಯಾಗಿ ಇಟ್ಟಿಲ್ಲ. 4 ನಿಗಮಗಳಿಗೆ ಸಾರಿಗೆ 1,413 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ‌. ಇದರಿಂದ ಸಾರಿಗೆ ಸಂಸ್ಥೆಗಳಿಗೆ ಸಮಸ್ಯೆ ಆಗುತ್ತಿದೆ ಅಂತ ಪ್ರಶ್ನೆ ಕೇಳಿದ್ರು.

 

ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿ, ‌ಸರ್ಕಾರದಿಂದ ಸಾರಿಗೆ ಇಲಾಖೆಗೆ 1,413 ಕೋಟಿ ರೂ. ಶಕ್ತಿ ಹಣ ಬಾಕಿ ಇದೆ. ಶಕ್ತಿ ಯೋಜನೆ ಪ್ರಾರಂಭ ಆದಾಗ ನಿತ್ಯ 80 ಲಕ್ಷ ಜನ ಸಂಚಾರ ಮಾಡ್ತಿದ್ದರು ‌‌ಹೀಗಾಗಿ ಮೊದಲು 3,200 ಕೋಟಿ ರೂ. ಶಕ್ತಿಗೆ ಅನುದಾನ ಇಡಲಾಗಿತ್ತು. ಶಕ್ತಿ ಯೋಜನೆ ಪ್ರಾರಂಭ ಮಾಡಿದ ನಂತರ 1 ಕೋಟಿ ನಿತ್ಯ ಒಡಾಟ ಆಯ್ತು. ಹೀಗಾಗಿ ಹಣದ ಹೆಚ್ಚುವರಿಯಾಗಿ ನೀಡಲು ಆಗಿಲ್ಲ. ಬಜೆಟ್ ನಲ್ಲಿ 5,015 ಕೋಟಿ ರೂ. ಇಡಲಾಗಿದೆ. ಸರ್ಕಾರದಿಂದ 1,413.47 ಕೋಟಿ ರೂ. ಬಾಕಿ ಇದೆ‌. ಹಣ ಬಿಡುಗಡೆ ಮಾಡುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದೇವೆ. ಹಣ ಬಿಡುಗಡೆ ಮಾಡಿದ ಮೇಲೆ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡೋದಾಗಿ ತಿಳಿಸಿದರು.

 

RELATED ARTICLES

Related Articles

TRENDING ARTICLES