Sunday, September 8, 2024

Union Budget 2024: ಕೇಂದ್ರ ಬಜೆಟ್​ ನಲ್ಲಿ ಏನೇನು ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಮಾಹಿತಿ

ನವದೆಹಲಿ: ಚಿನ್ನ ಮತ್ತು ಬೆಳ್ಳಿಯ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 6ಕ್ಕೆ ಮತ್ತು ಪ್ಲಾಟಿನಂ ಮೇಲಿನ ತೆರಿಗೆಯನ್ನು ಶೇಕಡಾ 6.4ರಷ್ಟು ಇಳಿಕೆ ಮಾಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

2024ನೇ ಸಾಲಿನ ಕೇಂದ್ರ ಬಜೆಟ್​ ಮಂಡನೆ ಇಂದು ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸತತ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ ಅನ್ನು ಇಂದು ಜು.23 ರಂದು ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.

ಇದನ್ನೂ ಓದಿ: Union Budget 2024: NDA ಮಿತ್ರ ಆಂಧ್ರ ಕ್ಕೆ ಬಜೆಟ್​ನಲ್ಲಿ ಭರಪೂರ ಕೊಡುಗೆ

ಫೆರೋನಿಕಲ್, ಬ್ಲಿಸ್ಟರ್ ತಾಮ್ರದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಲಾಗುವುದು. ಆದರೆ, ನಿಗದಿತ ಟೆಲಿಕಾಂ ಉಪಕರಣಗಳ ಮೇಲೆ ಶೇಕಡಾ 10 ರಿಂದ ಶೇಕಡಾ 15ಕ್ಕೆ ಹೆಚ್ಚಿಸಲಾಗಿದೆ. ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಮೂಲ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸುವುದು. ಸೀಗಡಿಗಳು ಮತ್ತು ಮೀನಿನ ಆಹಾರದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 5ಕ್ಕೆ ಇಳಿಸಲಾಗುವುದು ಎಂದು ಸಚಿವರು ತಿಳಿಸಿದರು. ಸರ್ಕಾರವು ಅಮೋನಿಯಂ ನೈಟ್ರೇಟ್ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 10ಕ್ಕೆ ಮತ್ತು ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್‌ಗಳ ಮೇಲೆ ಶೇಕಡಾ 25ಕ್ಕೆ ಏರಿಕೆ ಮಾಡಲಾಗುವುದು ಎಂದರು.

ಯಾವುದು ಇಳಿಕೆ?

  • ಚಿನ್ನ
  • ಬೆಳ್ಳಿ
  • ಪ್ಲಾಟಿನಂ
  • ಮೊಬೈಲ್​ ಫೋನ್​
  • ಮೊಬೈಲ್​ ಚಾರ್ಜರ್​
  • ಚರ್ಮದ ಉತ್ಪನ್ನಗಳು
  • ಸೋಲಾರ್ ಸೆಲ್, ಫ್ಯಾನ್
  • ಕ್ಯಾನ್ಸರ್ ಔಷಧಿ

ಯಾವುದು ದುಬಾರಿ?

  • ಪ್ಲಾಸ್ಟಿಕ್​ ಮತ್ತು ಪ್ಲಾಸ್ಟಿಕ್​ ಉತ್ಪನ್ನಗಳು
  • ವಿದ್ಯುತ್​ ಉಪಕರಣಗಳು
  • ಮೊಬೈಲ್​ ಟವರ್
  • ಬ್ರ್ಯಾಂಡೆಡ್ ಬಟ್ಟೆಗಳು
  • ಆಮದು ಆಗುವ ಬಟ್ಟೆಗಳು
  • ಪ್ಲೆಕ್ಸ್ ಮತ್ತು ಬ್ಯಾನರ್

RELATED ARTICLES

Related Articles

TRENDING ARTICLES