Sunday, September 8, 2024

Union Budget 2024: NDA ಮಿತ್ರ ಆಂಧ್ರ ಕ್ಕೆ ಬಜೆಟ್​ನಲ್ಲಿ ಭರಪೂರ ಕೊಡುಗೆ

ದೆಹಲಿ: ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲನೇ ಬಜೆಟ್​ ಮಂಡನೆ ಇಂದು ನಡೆಯಿತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್​ ಮಂಡನೆ ಮಾಡಿದರು. ಈ ಬಜೆಟ್​ನಲ್ಲಿ NDA ಮಿತ್ರ ಪಕ್ಷಗಳಿಗೆ ಬಂಪರ್​ ಕೊಡುಗೆ ನಿಡಿದ್ದಾರೆ.

ಇದನ್ನೂ ಓದಿ: Union Budget 2024: ಉದ್ಯೋಗಾಕಾಂಕ್ಷಿಗಳಿ ಕೇಂದ್ರದಿಂದ ಬಂಪರ್​ ಕೊಡುಗೆ!

ಆಂಧ್ರಪ್ರದೇಶಕ್ಕೆ ಈ ಹಿಂದಿನ ಭರವಸೆಯಂತೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. 26 ಸಾವಿರ ಕೋಟಿ ವೆಚ್ಚದಲ್ಲಿ ರೈಲು ಯೋಜನೆಗಳ ಆರಂಭವಾಗಲಿದೆ. ಇದರ ಜತೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು. ಒಟ್ಟು ಆಂಧ್ರಕ್ಕೆ 15,000 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

ಆಂಧ್ರಪ್ರದೇಶ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಇಂಧನ, ರೈಲು, ರಸ್ತೆ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುವುದು. ಪೋಲಾವರಂ ಪ್ರಾಜೆಕ್ಟ್​ಗೆ ಕೇಂದ್ರ ಸರ್ಕಾರದಿಂದ ಅನುದಾನ ನೀಡಲಾಗುವುದು. ವಿಶಾಖಪಟ್ಟಣ-ಚೆನ್ನೈ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಚಾಲನೆ ನೀಡಲಿದೆ. ಇದರ ಜತೆಗೆ ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES