Sunday, September 8, 2024

Union Budget 2024 Live : ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಮಂಡನೆ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್​​ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಮ್ಮ ಐತಿಹಾಸಿಕ ಸತತ 7ನೇ ಆಯವ್ಯಯ ಪ್ರಸ್ತುತಪಡಿಸಲಿದ್ದಾರೆ. 2024-25ರ ಸಾಲಿನ ಪೂರ್ಣ ಬಜೆಟ್​ ಇದಾಗಿದೆ. ಬೆಳಗ್ಗೆ 11 ಗಂಟೆಯಿಂದ ಸಚಿವೆ ನಿರ್ಮಲಾ ಬಜೆಟ್‌ ಮಂಡಿಸುವರು. ಇದು ಮೋದಿ 3.0 ಸರ್ಕಾರದ ಮೊದಲ ಬಜೆಟ್​ ಆಗಿರುವ ಕಾರಣ ಜನರಲ್ಲಿ ಹೆಚ್ಚು ಕುತೂಹಲ ಮನೆಮಾಡಿದೆ. ನಿರ್ಮಲಾ ಸೀತಾರಾಮನ್ ಈಗಾಗಲೇ ಹಣಕಾಸು ಸಚಿವಾಲಯಕ್ಕೆ ಆಗಮಿಸಿದ್ದು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

Live Updates:

    • 10:26 : ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಹಿ-ಖಾತಾ(ಕೆಂಪು ವಸ್ತ್ರದಲ್ಲಿ ಸುತ್ತಿದ ದಾಖಲೆ) ಹಿಡಿದು ಹಣಕಾಸು ಸಚಿವಾಲಯದಿಂದ ಸಂಸತ್ ಭವನದತ್ತ ತೆರಳಿದ್ದಾರೆ.
    • 10:26 : ಬಿಳಿ ಬಣ್ಣದ ಸೀರೆಯಲ್ಲಿ ನಿರ್ಮಲಾ ಸೀತಾರಾಮನ್ ಕಂದು ನೇರಳೆ ಬಣ್ಣದ ಅಂಚು ಹೊಂದಿರುವ ಬಿಳಿ ಸೀರೆ ಉಟ್ಟು ಬಂದಿರುವ ಅವರು ಸಂಸತ್ ಭವನದತ್ತ ತೆರಳಿದ್ದಾರೆ. ತಮ್ಮ ಐದನೇ ಬಜೆಟ್ ಮಂಡನೆ ವೇಳೆ ಧಾರವಾಡದ ಜಿಲ್ಲೆಯ ನವಲಗುಂದದ ಕಸೂತಿ ಕಲೆ ಇರುವ ಸೀರೆ ಉಟ್ಟಿದ್ದರು.
    • 10:28 : 2019ರ ಬಜೆಟ್ ಮಂಡನೆ ವೇಳೆ ಗೋಲ್ಡನ್ ಬಾರ್ಡರ್ ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯಟ್ಟು ಮಿಂಚಿದ್ದರು. 2020ರಲ್ಲಿ ಹಳದಿ ಹಾಗೂ ನೀಲಿ ಮಿಶ್ರಿತ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. 2021ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆಯಲ್ಲಿ ಮತ್ತು 2022ರಲ್ಲಿ ಕಂದು ಬಣ್ಣದ ಕೈಮಗ್ಗ ಸೀರೆ ಧರಿಸಿದ್ದರು. 2023ರ ಮಧ್ಯಂತರ ಬಜೆಟ್ ವೇಳೆ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.
    • 10:30 : ಬಜೆಟ್ ಬಗ್ಗೆ ಕಾಂಗ್ರೆಸ್ ಸಂಸದ ಗೌರವ್ ಗೋಗಯ್ ಅವರು ಕಿಡಿಕಾರಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಆಪ್ತರಾಗಿರುವ ಕೋಟ್ಟದಿಪತಿಗಳಿಗೆ ಸಹಾಯ ಮಾಡಲು ಈ ಬಜೆಟ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
    • 10:34 : ಜೆಟ್ ಪ್ರತಿಗಾಗಿ ಸಾರ್ವಜನಿಕರು Union Budget Mobile App ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸಬಹುದು.
    • 10:35 : ಈ ಬಜೆಟ್‌ನಲ್ಲಿ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ತೀವ್ರ ನಿರೀಕ್ಷೆ ಹೊಂದಲಾಗಿದೆ.
    • 10:40 : 2024-25ರ ಪೂರ್ಣ ಬಜೆಟ್ ಮಂಡಿಸುವ ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಸಂಪ್ರದಾಯದ ಪ್ರಕಾರ, ಹಣಕಾಸು ಸಚಿವರು ಸಂಸತ್ತಿಗೆ ತೆರಳುವ ಮೊದಲು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದರು. ಕೇಂದ್ರ ಬಜೆಟ್ ಮಂಡಿಸಲು ಸಂಸತ್ತಿಗೆ ತೆರಳುವ ಮುನ್ನ ಸೀತಾರಾಮನ್ ಅವರಿಗೆ ಮುರ್ಮು ಅವರು ‘ದಹಿ-ಚಿನಿ’ (ಮೊಸರು-ಸಕ್ಕರೆ) ನೀಡಿದರು.
    • 10:51 :ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿದ್ದು ಮೋದಿ ಅವರು ಹೇಗೆ ಸಮತೋಲನ ಮಾಡಿದ್ದಾರೆ ಎಂಬುದರ ಬಗ್ಗೆ ದೇಶದ ಚಿತ್ತ ನೆಟ್ಟದ
    • 10:56 : ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು ಈ ಹಿನ್ನೆಲೆಯಲ್ಲಿ ಷೇರುಪೇಟೆ ಜಿಗಿತ ಕಂಡಿದೆ. ಸೆನ್ಸೆಕ್ಸ್ 264 ಅಂಕ ಜಿಗಿತ ಕಂಡಿದೆ.
    •  11.05 : ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದ್ದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ.
    • 11:08 : ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ಶುರು
    • 11:10 : ಸತತ ಮೂರನೇ ಬಾರಿಗೆ ಪ್ರಧಾನಿಯಾಗುವ ಮೂಲಕ ನರೇಂದ್ರ ಮೋದಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳಿಂದ ಇದೆಲ್ಲ ಸಾಧ್ಯವಾಗಿದೆ-ನಿರ್ಮಲಾ
    • 11:28 : NDA ಗೆ ಬೆಂಬಲ ನೀಡಿದ ಆಂಧ್ರಪ್ರದೇಶ್​ ಮತ್ತು ಬಿಹಾರಕ್ಕೆ ಬಂಪರ್​ ವಿಶೇಷ ಅನುದಾನ ಘೋಷಣೆ.
    • 11:28 : ಆಂಧ್ರ ರಾಜಧಾನಿ ಅಮರಾವತಿಗೆ ವಿಶೇಷ ಅನುದಾನ ಘೋಷಣೆ.
    • 11:29 : ಹೈದರಾಬಾದ್ ಮತ್ತು ಬೆಂಗಳೂರು ಕಾರಿಡಾರ್​ ಯೋಜನೆಗೆ ಅನುದಾನ ಘೋಷಣೆ.
    • 11: 30 : ಬಿಹಾರಕ್ಕೆ ವಿಮಾನ ನಿಲ್ದಾಣ ಮತ್ತು ಮೆಡಿಕಲ್​ ಕಾಲೇಜು ಘೋಷಣೆ
    • 11:31 : ಆಂಧ್ರಕ್ಕೆ 15 ಸಾವಿರ ಕೋಟಿ ವಿಶೇಷ ಅನುಧಾನ ಘೋಷಣೆ
    • 11: 32 : ಗ್ರಾಮೀಣಾಭಿವೃದ್ದಿಗೆ 2.66 ಲಕ್ಷ ಕೋಟಿ ಘೋಷಣೆ.
    • 11: 33 : ಮುದ್ರಾ ಲೋನ್​ ಮಿತಿ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ.
    • 11: 34: ಮಹಿಳಾಭಿವೃದ್ದಿಗೆ 3 ಲಕ್ಷ ಕೋಟಿ ಅನುದಾನ ಮೀಸಲು.
    • 11: 35 : 1 ಕೋಟಿ ಯುವಕರಿಗೆ ಹೊಸ ಇನ್ಟರ್ನ್​ಶಿಪ್​ ಯೋಜನೆ.
    • 11: 36 : 500 ಬೃಹತ್ ಕಂಪೆನಿಗಳಲ್ಲಿ 12 ತಿಂಗಳು ತರಬೇತಿ.
    • 11: 40 : ಬ್ಯಾಂಕ್ ದಿವಾಳಿ ತಪ್ಪಿಸಲು ಹೊಸಾ ನೀತಿ ಘೋಷಿಸಿದ ಸರ್ಕಾರ.
    • 11: 42 : 1 ಕೋಟಿ ನಗರದ ಬಡವರಿಗೆ ಮನೆ ಕಟ್ಟಲು ಸಹಾಯ. ಪ್ರಧಾನಮಂತ್ರಿ ಆವಾಜ್​        ಯೋಜನೆಯಡಿ ಮನೆ ನಿರ್ಮಾಣ
    • 11: 44 : ಬಿಹಾರ ಅಭಿವೃದ್ದಿಗೆ 26000 ಸಾವಿರ ಕೋಟಿ ಅನುದಾನ ಘೋಷಣೆ.
    • 11: 45: ಒಂದು ಕೋಟಿ ಮನೆಗಳಿಗೆ ಸೋಲಾರ್​ ಅವಳವಡಿಕೆ.
    • 11: 47: ಬಿಹಾರಕ್ಕೆ 4 ಎಕ್ಸ್​ಪ್ರೆಸ್​ ವೇ ಕೊಡುಗೆ.
    • 11: 48 : 1 ಕೋಟಿ ಮನೆಗಳಿಗೆ 300 ಯೂನಿಟ್​ ಉಚಿತ ಸೋಲಾರ್​ ವಿದ್ಯುತ್​. ಸೋಲಾರ್ ರೂಫ್ ಟಾಪ್​ ಮೂಲಕ ವಿದ್ಯುತ್ ಉತ್ಪಾದನೆ. 1.28 ಕೋಟಿ ಸೌರ ಶಕ್ತಿ ಯೋಜನೆಗೆ ನೋಂದಣಿ.
    • 11:50 : ಬಿಹಾರ ಪ್ರವಾಹ ಪರಿಸ್ಥಿತಿ ನಿಭಾಯಿಸಲು 11.500 ಕೋಟಿ ರೂ. ನೆರವು ಘೋಷಣೆ.
    • 11:51 : ಬಿಹಾರದ ನಳಂದ ವಿವಿಗೆ ವಿಶೇಷ ಅನುದಾನ.
    • 11: 56 : ಡಾಲರ್​ ಬದಲಿಗೆ ರೂಪಾಯಿ ವ್ಯವಹಾರಕ್ಕೆ ಒತ್ತು.
    • 11: 57: 3 ಕ್ಯಾನ್ಸರ್​ ಔಷಧಿಗಳಿಗೆ ತೆರಿಗೆ ರದ್ದು.
    • 12: 00: ಬಜೆಟ್​ನ ಒಟ್ಟು ಗಾತ್ರ 32.2 ಲಕ್ಷ ಕೋಟಿ.
    • 12:02 : ಮೊಬೈಲ್​ ಬಿಡಿ ಭಾಗಗಳ ತೆರಿಗೆ ಇಳಿಕೆ.
    • 12: 04: ಮೀನು ಆಹಾರ ಆಮಗಿಗೆ ತೆರಿಗೆ ಕಡಿತ.
    • 12: 05 : 25 ಮಿನರಲ್​ಗಳ ಮೇಲಿನ ತರತಿಗೆ ಇಳಿಕೆ.
    • 12: ಚಿನ್ನ, ಬೆಳ್ಳಿ, ಪ್ಲಾಟೀನಂ ಸುಂಕ ಶೇ.6 ಕ್ಕೆ ಇಳಿಕೆ.

RELATED ARTICLES

Related Articles

TRENDING ARTICLES