Sunday, September 8, 2024

ಯಾಕ್​ ಗುರಾಯಿಸ್ತಾ ಇದೀಯ ಎಂದಿದಕ್ಕೆ ಯುವಕ ಕೊಲೆ!

ಬೆಂಗಳೂರು: ಯಾಕ್​ ಗುರಾಯಿಸ್ತಾ ಇದಿಯಾ ಎಂದು ಪ್ರಶ್ನೆ ಮಾಡಿದ್ದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಹೊಯ್ಸಳ ನಗರದ ಮನೋಜ್​ (22) ಕೊಲೆಯಾದ ವ್ಯಕ್ತಿ, ಶನಿವಾರ ಸಂಜೆ ಹೊಯ್ಸಳ ನಗರದ ಮೂರನೇ ಮುಖ್ಯರಸ್ತೆ ಬಳಿ ಈ ಘಟನೆ ನಡೆದಿದೆ.

ಹೊಯ್ಸಳ ನಗರದ ಬಳಿ ಮನೋಜ್​ ತನ್ನ ಸ್ನೇಹಿತರೊಂದಿಗೆ ಹೋಗುತ್ತಿದ್ದಾಗ ಎದುರಿಗೆ ಬಂದ ವ್ಯಕ್ತಿ ಇವನನ್ನ ನೋಡುತ್ತಿದ್ದ. ಈ ವೇಳೆ ಯಾಕಪ್ಪ ಗುರಾಯಿಸ್ತಾ ಇದೀಯ ಎಂದು ಪ್ರಶ್ನೆ ಮಾಡಿದ್ದಾನೆ, ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ, ಜಗಳ ವಿಕೋಪಕ್ಕೆ ತಿರುಗಿ ಮನೋಜ್​ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ವಿದ್ಯುತ್​ ಅವಘಡ: ಮೂರು ಅಂತಸ್ತಿನ ಬೇಕರಿ ಬೆಂಕಿಗಾಹುತಿ!

ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಮನೋಜ್​ನನ್ನು ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮನೋಜ್​ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES