Sunday, September 8, 2024

ಕನ್ನಡಿಗರ ಸ್ವಾಭಿಮಾನವೇ ಮುಖ್ಯ ಅಂದ ಅಭಿನಯ ಚಕ್ರವರ್ತಿ: ಫೋನ್ ಪೇ ರಾಯಭಾರತ್ವದಿಂದ ಹೊರ ಬರ್ತಾರ ಕಿಚ್ಚ?

ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಕ ಸರ್ಕಾರದ ಹೊಸ ಮಸೂದೆಯ ವಿರುದ್ಧ ಫೋನ್ ಪೇ ಸಿಇಓ ಸಮೀರ್ ನಿಗಮ್ ಕಮೆಂಟ್ ಮಾಡಿದ್ದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ವಿರುದ್ಧ ಬಾಯ್ಕಾಟ್ ಅಭಿಯಾನಗಳೂ ಶುರುವಾಗಿವೆ ಈ ಬೆಳವಣಿಗೆಗಳ ನಡುವೆ ಕಿಚ್ಚ ಸುದೀಪ್​ ಕನ್ನಡಿಗರ ಪರ ಬ್ಯಾಟ್​ ಬೀಸಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ನಾನೂ ಬರ್ತೀನಿ ಬಾಸ್ ಎಂದು ತಗ್ಲಾಕೊಂಡ ಪ್ರದೋಶ್​​

ಫೋನ್ ಪೇ ಬ್ರಾಂಡ್ ಅಂಬಾಸಿಡರ್ ಆಗಿರುವ ಕಿಚ್ವ ಸುದೀಪ್ ಅವರು ಕೂಡಾ ಈಗ ಕನ್ನಡಿಗರ ಪರ ನಿಂತಿದ್ದಾರೆ. ಫೋನ್ ಪೇ ಇನ್ನು ಒಂದು ದಿನದ ಒಳಗಾಗಿ ಕನ್ನಡಿಗರ ಕ್ಷಮೆ ಕೋರಿ, ರಾಜ್ಯ ಸರ್ಕಾರದ ನಿಲುವಿಗೆ ಬದ್ದವಾಗದಿದ್ದರೆ ತಾವು ಫೋನ್ ಪೇ ಬ್ರಾಂಡ್ ಅಂಬಾಸಡರ್ ಆಗಿ ಮುಂದುವರೆಯದೇ ಇರಲು ನಿರ್ಧರಿಸಿದ್ದಾರೆ.

ಈಗ ಫೋನ್ ಪೇ ವಿಚಾರವಾಗಿ ಸುದೀಪ ಅವರ ನಿರ್ಧಾರ ಏನಾಗುತ್ತದೆ ಅನ್ನೋದು ಹಲವರ ಪ್ರಶ್ನೆಯಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ನಾಡು-ನುಡಿಯ ವಿಚಾರ ಬಂದಾಗ ಸದಾ ಮುಂದಿರುತ್ತಾರೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ʻʻಕಂಪನಿ, ಹಣಕ್ಕಿಂತಾ ಕನ್ನಡಿಗನಾಗಿ ನನ್ನ ಸ್ವಾಭಿಮಾನ ಮುಖ್ಯʼʼ ಎನ್ನುವುದು ಸುದೀಪ್ ಅವರ ನಿರ್ಧಾರವಾಗಿದೆ. ಈ ಕಾರಣದಿಂದ ಒಂದು ದಿನದ ಒಳಗಾಗಿ ಕಿಚ್ಚ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES