Sunday, September 8, 2024

‘ಭೀಮ’ನ ಜಂಗ್ಲಿ ಆಟ ಶುರು: ಆಗಸ್ಟ್ 9ಕ್ಕೆ ಭೀಮನ ಆಗಮನ.. ಸೈಕ್ ಆಗಿಸಿದ 4ನೇ ಸಾಂಗ್!

ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್​ಗೆ ಭೀಮಬಲ ಬೇಕಿದೆ. ಅದೇ ಕಾರಣದಿಂದ ಆಗಸ್ಟ್ 9ಕ್ಕೆ ದುನಿಯಾ ವಿಜಯ್ ಆ ಶಕ್ತಿಯನ್ನ ತಂದುಕೊಡೋಕೆ ಮುಂದಾಗಿದ್ದಾರೆ. ಸಲಗ ಬಳಿಕ ವಿಜಯ್ ಕುಮಾರ್ ನಟಿಸಿ, ನಿರ್ದೇಶಿಸಿರೋ ಭೀಮ ಪ್ರೇಕ್ಷಕರ ಮುಂದೆ ಬರ್ತಿದೆ. ಈಗಾಗ್ಲೇ ಹಾಡುಗಳಿಂದ ಹಂಗಾಮ ಮಾಡ್ತಿರೋ ಭೀಮ, ಬೂಮ್ ಬೂಮ್ ಬೆಂಗಳೂರು ಅಂತ ಮಸ್ತ್ ಮ್ಯಾಜಿಕ್ ಮಾಡ್ತಿದ್ದಾರೆ.

ಭೀಮ.. ಸಲಗಕ್ಕಿಂತ ಹತ್ತು ಪಟ್ಟು ಬಲಿಷ್ಟವಾದ ಸಿನಿಮಾ. ಹೌದು.. ಮೇಕಿಂಗ್, ಕಥೆ, ಪಾತ್ರಗಳು, ಬಜೆಟ್, ಪ್ರಮೋಷನ್ಸ್ ಹೀಗೆ ಎಲ್ಲಾ ಆ್ಯಂಗಲ್​​ನಿಂದ ಬಹುನಿರೀಕ್ಷಿತ ಸ್ಯಾಂಡಲ್​ವುಡ್ ಸಿನಿಮಾ ಅನಿಸಿಕೊಂಡಿದೆ. ಅದರಲ್ಲೂ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರೋ ಸಿನಿಮಾ ಆಗಿರೋದ್ರಿಂದ ಈ ಬಾರಿಯೂ ಬಿಗ್ ಬೌಂಡರಿ ಬಾರಿಸ್ತಾರೆ ಅನ್ನೋ ಲಕ್ಷಣ ತೋರಿದೆ.

ಜಗದೀಶ್ ಹಾಗೂ ಕೃಷ್ಣ ಸಾರ್ಥಕ್ ನಿರ್ಮಾಣದ ಈ ಸಿನಿಮಾ ಸದ್ಯ ಬೆಂಡಾಗಿರೋ ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್​ಗೆ ಭೀಮಬಲ ತಂದುಕೊಡಬೇಕಿದೆ. ಬಿಗ್ ಸ್ಟಾರ್ಸ್​ ಬಿಗ್ ಸಿನಿಮಾಗಳಿಲ್ಲದೆ ಬಿಕೋ ಅಂತಿರೋ ಇಂಡಸ್ಟ್ರಿಗೆ ಒಂದು ಬಿಗ್ ಓಪನಿಂಗ್ ಬೇಕಿದೆ. ಆ ಓಪನಿಂಗ್ ಭೀಮ ಚಿತ್ರದ ರಿಲೀಸ್ ಮೂಲಕ ಸಿಗಲಿದೆ ಎನ್ನಲಾಗ್ತಿದೆ. ಇದೊಂದು ಯೂತ್​ಫುಲ್ ಮಾಸ್ ಎಂಟರ್​ಟೈನರ್ ಆಗಿದ್ದು, ಡ್ರಗ್ ದುನಿಯಾದ ವಿರುದ್ಧ ನಾಯಕನಟ ಸಾರುವ ಯುದ್ಧದ ಕಥಾನಕ ಹೊಂದಿರಲಿದೆ.

ಇದನ್ನೂ ಓದಿ: ಡೈರೆಕ್ಟರ್ ಕತ್ತು ಕೊಯ್ತಾ ಬ್ಲೇಡ್? ಆ ಅಪವಾದ ಎಷ್ಟು ನಿಜ?: ಮೃತ ವಿನೋದ್ ಗುರು ಪಿ. ಶೇಷಾದ್ರಿ ಅಚ್ಚರಿಯ ಹೇಳಿಕೆ

ಈಗಾಗ್ಲೇ ಮೂರು ಸಾಂಗ್ಸ್ ಸೂಪರ್ ಹಿಟ್ ಆಗಿದ್ದು, ಎಂದಿನಂತೆ ಎಲ್ಲಾ ಸಂಗೀತ ನಿರ್ದೇಶಕರು ಮಾಡೋ ಒಂದೇ ಬಗೆಯ ಪ್ಯಾಟ್ರನ್ ಹಾಡುಗಳಿಗಿಂತ ಡಿಫರೆಂಟ್ ಆಲ್ಬಮ್ ಅನಿಸಿಕೊಂಡಿದೆ ಭೀಮ. ಚರಣ್ ರಾಜ್ ಸಂಗೀತಕ್ಕೆ ಇಡೀ ಕರುನಾಡು ಭೇಷ್ ಅಂತಿದೆ. ಅವುಗಳ ಲಿಸ್ಟ್​ಗೆ ಇದೀಗ ಮತ್ತೊಂದು ನಯಾ ಸಾಂಗ್ ಸೇರಿದೆ. ಅದೇ ಬೂಮ್ ಬೂಮ್ ಬೆಂಗಳೂರು. ಬುಡಕಟ್ಟು ಜನಾಂಗದ ಕಲಾವಿದರು ಈ ಹಾಡಿಗೆ ಧನಿಯಾಗಿದ್ದು, ಕೇಳೋಕೆ ಸಂಥಿಂಗ್ ಸ್ಪೆಷಲ್ ಅನಿಸಿದೆ.

ಜೆ.ಬಿ ರಮೇಶ ಹಾಗೂ ಟೀಂ ಗಿರಿಜಾ ಸಾಹಿತ್ಯದ ಈ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುವಂತಿದೆ. ವಿಲನ್ ಪಾತ್ರದಾರಿ ಡ್ರ್ಯಾಗನ್ ಮಂಜು, ದುನಿಯಾ ವಿಜಯ್ ಹಾಗೂ ಒಂದಷ್ಟು ಪಾತ್ರದಾರಿಗಳು ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಒಳ್ಳೆ ಡ್ಯಾನ್ಸಿಂಗ್ ನಂಬರ್ ಆಗಿ ಹೊರಹೊಮ್ಮಿದೆ. ಸ್ಯಾಂಡಲ್​ವುಡ್ ಸಲಗ ವಿಜಯ್ ಅವರು ಈ ಚಿತ್ರದಲ್ಲಿ ವೆರೈಟಿ ಗೆಟಪ್ಸ್​​ನಲ್ಲಿ ಕಾಣಿಸಿಕೊಂಡಿದ್ದು, ಯಂಗ್ ಲುಕ್ ಸಖತ್ ಕಿಕ್ ಕೊಡಲಿದೆ. ಮಾಸ್ ಎಲಿಮೆಂಟ್ಸ್ ಜೊತೆ ಸಮಾಜಕ್ಕೊಂದು ಸ್ಟ್ರಾಂಗ್ ಮೆಸೇಜ್ ಕೊಡಲಿರೋ ಭೀಮ, ಏನೆಲ್ಲಾ ಹೊತ್ತು ಬರ್ತಾನೆ ಅನ್ನೋದನ್ನ ಕಾದು ನೋಡಬೇಕಿದೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES