Sunday, September 8, 2024

ಪತ್ನಿಯ ಪದವಿ ಪ್ರಧಾನ ಸಮಾರಂಭಕ್ಕೆ ಆಂಧ್ರ ಡಿಸಿಎಂ ಪವನ್​ ಕಲ್ಯಾಣ್​ ಹಾಜರು!

ಬೆಂಗಳೂರು: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಮ್ಮ ಪತ್ನಿ ಅನ್ನಾ ಲೆಜ್ನೇವಾ ಅವರ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದರು.

ಇತ್ತೀಚೆಗೆ ಅನ್ನಾ, ಸಿಂಗಾಪುರ್ ನ್ಯಾಷನಲ್ ಯೂನಿವರ್ಸಿಟಿಯಿಂದ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದರು. ಹೀಗಾಗಿ, ಪವನ್ ಮತ್ತು ಅನ್ನಾ ಲೆಜ್ನೇವಾ ಇಬ್ಬರೂ ಪದವಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದರು.

ಇದನ್ನೂ ಓದಿ: ಮುಂದಿನ 5 ದಿನ ರಾಜ್ಯದಲ್ಲಿ ವರುಣಾರ್ಭಟ ಫಿಕ್ಸ್

ಸಿಂಗಾಪುರಕ್ಕೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿದ್ದಾಗ ದಿಢೀರ್ ಭೇಟಿಯ ಹಿಂದಿನ ಕಾರಣವೇನೆಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದರು. ಕೊನೆಗೂ ಅವರ ಭೇಟಿಯ ಹಿಂದಿನ ಕಾರಣ ಬಯಲಾಗಿದೆ. ಅನ್ನಾ ಲೆಜ್ನೇವಾ ಅವರ ಪದವಿ ಪ್ರದಾನ ಸಮಾರಂಭದಲ್ಲಿ ಗಂಡ ಹೆಂಡತಿ ಕ್ಲಿಕ್ಕಿಸಿಕೊಂಡಿರುವ ಫೋಟೊ ವೈರಲ್‌ ಆಗುತ್ತಿದೆ.

ಪವನ್ ಕಳೆದ ಕೆಲವು ದಿನಗಳಿಂದ ವಾರಾಹಿ ದೀಕ್ಷೆಯಲ್ಲಿದ್ದರು. ಅವರು ತಮ್ಮ ದೀಕ್ಷಾ ಸಮಯದಲ್ಲಿ ಸಾಂಪ್ರದಾಯಿಕ ದೀಕ್ಷಾ ಉಡುಗೆಯಲ್ಲಿದ್ದರು. ಈಗ, ದೀಕ್ಷಾ ಪೂರ್ಣಗೊಂಡಂತೆ, ಪವನ್ ಸಿಂಗಾಪುರಕ್ಕೆ ತೆರಳಿದ್ದಾರೆ.

RELATED ARTICLES

Related Articles

TRENDING ARTICLES