Sunday, September 8, 2024

UPSC ಅಧ್ಯಕ್ಷ ಮನೋಜ್​ ಸೋನಿ ರಾಜೀನಾಮೆ!

ದೆಹಲಿ: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮನೋಜ್​ ಸೋನಿ ಅವರು ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೇ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಮನೋಜ್​ ಸೋನಿಯವರ UPSC ಅಧ್ಯಕ್ಷ ಸ್ಥಾನ 2029ರ ವರೆಗೆ ಇತ್ತು. ಆದರೇ, ಅವಧಿಗೂ ಮುನ್ನವೇ ರಾಜೀನಾಮೆ ಸಲ್ಲಿಸಿದ್ದಾರೆ.

2017 ರಲ್ಲಿ ಮನೋಜ್​ ಅವರು ಕೇಂದ್ರ ಲೋಕಸೇವಾ ಆಯೋಗ ಸೇರಿಕೊಂಡರು, ಮೇ16, 2023 ರಲ್ಲಿ ಅವರು UPSC ಅಧ್ಯಕ್ಷರನ್ನಾಗಿ ನೇಮಿಸಲಾಯಿತು, ಇವರ ಕಾಲಾವಧಿ 2029ರ ವರೆಗೂ ಇದ್ದೂ ಅವಧಿಗೂ ಮುನ್ನವೇ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಜೈನ ಧರ್ಮದವರ ಕ್ಷಮೆ ಕೇಳಿದ ಹಂಸಲೇಖ

ದೇಶಾದ್ಯಂತ UPSC ನೇಮಕಾತಿಯಲ್ಲಿ ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದ ಪೂಜಾ ಖೇಡ್ಕರ್​ ಪ್ರಕರಣ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಸೋನಿ ರಾಜೀನಾಮೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ತಮ್ಮ ಅಧ್ಯಕ್ಷ ಸ್ಥಾನಕ್ಕೆ ಕಳೆದ ಒಂದು ತಿಂಗಳ ಮುಂಚೆಯೇ ಅವರು ರಾಜೀನಾಮೇಯನ್ನು ರಷ್ಟ್ರಪತಿಗಳಿಗೆ ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿದೆ.

ಪ್ರಧಾನಿ ಮೋದಿಯವರಿಗೆ ಆತ್ಯಾಪ್ತರಾಗಿರುವ ಮನೋಜ್​ ಸೋನಿ ಅವರನ್ನು ಮೋದಿ, ವಡೋದರಾದ ಎಂಎಸ್​ ವಿಶ್ವವಿದ್ಯಾಲಯದ ಉಪಕುಲಪತಿಯನ್ನಾಗಿ 2005ರಲ್ಲಿ ಆಯ್ಕೆಮಾಡಿದ್ದರು. ದೇಶದ ಅತ್ಯಂತ ಕಿರಿಯ ಉಪಕುಲಪತಿ ಎನ್ನುವ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದರು.

RELATED ARTICLES

Related Articles

TRENDING ARTICLES