Sunday, September 8, 2024

ವಿದ್ಯಾರ್ಥಿನಿ ಸಾವಿಗೆ ಕಾರಣನಾದ ಶಿಕ್ಷಕನಿಗೆ ಅಮಾನತು ಶಿಕ್ಷೆ ವಿಧಿಸಿ: ಮುತಾಲಿಕ್​ ಆಗ್ರಹ​

ಹಾವೇರಿ: ಜಿಲ್ಲೆಯ ಆಲದಕಟ್ಟಿ ಗ್ರಾಮದ ಬಾಲಕಿ ಆತ್ಮಹತ್ಯೆ ಪ್ರಕರಣ ಮತ್ತು ಬಂಕಾರದಲ್ಲಿ ರಸ್ತೆಯಲ್ಲಿರುವ ದರ್ಗಾ ತೆರವುಗೊಳಿಸುವಂತೆ ಪ್ರಮೋದ್​ ಮುತಾಲಿಕ್​​​​ ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ರೈತನಿಗೆ ಅವಮಾನ: ಒಂದು ವಾರ GT Mall ಬಂದ್​ಗೆ ಸಚಿವರು ಸೂಚನೆ

ಹಿರೇಕೆರೂರ ತಾಲೂಕಿನ ಆಲದಕಟ್ಟಿ ಗ್ರಾಮದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ವಸತಿ ಶಾಲೆಯ ಮುಸ್ಲಿಂ ಶಿಕ್ಷಕ ಬಾಲಕಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ. ಆಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಓದಿನಲ್ಲಿ ನಂಬರ್ ಒನ್ ಬಂದಿದ್ದಳು. ಆದ್ರೆ ಶಿಕ್ಷಕ ನೀಡಿರುವ ಮಾನಸಿಕ ಹಿಂಸೆಗೆ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಹಿನ್ನೆಲೆ ಶಿಕ್ಷಕನನ್ನು ಸಸ್ಪೆಂಡ್​ ಮಾಡಿ ಮನೆಗೆ ಕಳಿಸಿ ಎಂದು ಮುತಾಲಿಕ್​ ಆಗ್ರಹಿಸಿದ್ದಾರೆ.

ಇದೇ ವೇಳೆ ವಾಲ್ಮೀಕಿ ಅಭಿವೃದ್ದಿ ನಿಗಮದ ಅಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಲೂಟಿ ಮಾಡಿದ್ದೀರಿ, ನಾಚಿಕೆ ಮಾನ, ಮರ್ಯಾದೆ ಇದ್ರೆ ಮೃತ ಅಧಿಕಾರಿ ಚಂದ್ರಶೇಖರ್​ಗೆ 25 ಲಕ್ಷ ಪರಿಹಾರ ಕೊಡಿ ಎಂದು ಆಗ್ರಹಿಸಿದ್ದಾರೆ. ಬಂಕಾಪುರದಲ್ಲಿ ಹಲವಾರು ವರ್ಷಗಳಿಂದ ರಸ್ತೆ ಮಧ್ಯೆದಲ್ಲೇ ದರ್ಗಾ ಇದೆ. ನೀವು ಬುಲ್ಡೋಜರ್​ ಹತ್ತಿಸುತ್ತಿರೋ ಅಥವಾ ನಾವು ಬುಲ್ಡೋಜರ್​​ ನುಗ್ಗಿಸಬೇಕೋ ಎಂದು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES