Sunday, September 8, 2024

ರೀಲ್ಸ್​ ಮಾಡಲು ಹೋಗಿ 300 ಅಡಿ ಆಳದ ಕಮರಿಗೆ ಬಿದ್ದು ಯುವತಿ ಸಾವು

ಮುಂಬೈ: ರೀಲ್ಸ್ ವಿಡಿಯೊ ಚಿತ್ರೀಕರಿಸಲು ಹೋಗಿ 300 ಅಡಿ ಆಳವಾದ ಕಮರಿಗೆ ಬಿದ್ದು ಯುವತಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ನಡೆದಿದೆ.

ಮುಂಬೈನ ಮುಲುಂಡ್ ನಿವಾಸಿ ಅನ್ನಿ ಕಾಮ್ಹಾರ್ ಮೃತ ಯುವತಿ, ಈಗೆ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದರು,  ತಮ್ಮ ಸೇಹಿತರೊಂದಿಗೆ ಮಹಾರಾಷ್ಟ್ರದ ರಾಯಗಢದ ಮಂಗಾಂವ್‌ನ ಪ್ರಸಿದ್ದ ಕುಂಭೆ ಜಲಪಾತಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿಯುವ ವೇಳೆ ಆಳವಾದ ಕಮರಿಗೆ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಪೊಲೀಸರು ಅಗ್ನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ ಆಕೆ ಬದುಕುಳಿಯಲಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಟೆಂಪಲ್​ನಲ್ಲಿ ಜಾರಿ ಬಿದ್ದ ಮಾಜಿ ಸಚಿವ ಹೆಚ್​.ಡಿ ರೇವಣ್ಣ; ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ

ಅನ್ನಿ ಕಾಮ್ಹಾರ್, ಚಾರ್ಟರ್ಡ್​ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕವೇ ಹೆಚ್ಚು ಖ್ಯಾತಿ ಗಳಿಸಿದ್ದರು. ಪ್ರವಾಸ ಕ್ಷಣಗಳನ್ನು ಸೆರೆ ಹಿಡಿಯುವ ಹಾಗೂ ಅಲ್ಲಿನ ವಿಶೇಷ ಸ್ಥಳಗಳ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಿಕೊಂಡಿದ್ದ ಅನ್ನಿ, 2.5 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದರು. ಇವರ ವಿಡಿಯೊಗಳಿಗೆ ಮಿಲಿಯನ್‌ಗಟ್ಟಲೆ ವೀವ್ ಸಹ ಬಂದಿದೆ.

ಟ್ರಾವಲ್ ಬ್ಲಾಗರ್ ಆಗಿದ್ದ ಅನ್ನಿ, ಪ್ರೇಕ್ಷಣೀಯ ಸ್ಥಳಗಳಿಗೆ ಹೇಗೆ ತಲುಪಬೇಕು ಎಂಬುವುದರ ಕುರಿತು ಮಾಹಿತಿ ಒದಗಿಸುತ್ತಿದ್ದರು. ತಾವು ಭೇಟಿ ನೀಡಿದ ಪ್ರವಾಸದ ಅನುಭವಗಳನ್ನೂ ವಿಡಿಯೊ ಮೂಲಕ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು.

RELATED ARTICLES

Related Articles

TRENDING ARTICLES