Sunday, September 8, 2024

40ಕ್ಕೂ ಹೆಚ್ಚು ಮಹಿಳೆಯರನ್ನು ಹತ್ಯೆಗೈದಿದ್ದ ಹಂತಕ ಲಾಕ್​​

ಕೀನ್ಯಾ: ಕಳೆದ ಎರಡು ವರ್ಷಗಳಲ್ಲಿ 42 ಮಹಿಳೆಯರನ್ನು ಹತ್ಯೆ ಮಾಡಿದ್ದ ಶಂಕಿತ ಸರಣಿ ಹಂತಕನನ್ನು ಬಂಧಿಸಲಾಗಿದೆ ಎಂದು ಕೀನ್ಯಾದ ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ನೈರೋಬಿಯ ಪ್ರದೇಶವೊಂದರ ಕ್ವಾರಿಯಲ್ಲಿ ಒಂಬತ್ತು ಮಹಿಳೆಯರ ಛಿದ್ರಗೊಂಡ ಶವಗಳು ಪತ್ತೆಯಾಗಿದ್ದವು. ಪ್ರಕರಣ ತನಿಖೆ ನಡೆಸಿದ ಪೊಲೀಸರು ಹಂತಕನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಸಾವಿನಿಂದ ಜಸ್ಟ್‌ ಮಿಸ್‌ ಆದ ಡೊನಾಲ್ಡ್‌ ಟ್ರಂಪ್‌!: ಗುಂಡಿನ ದಾಳಿಯಿಂದ ಟ್ರಂಪ್‌ಗೆ ಪ್ಲೆಸ್‌ ಆಗುತ್ತಾ..?

ಹಂತಕನನ್ನು 33 ವರ್ಷದ ಕಾಲಿನ್ಸ್ ಜುಮೈಸಿ ಖಲುಶಾ ಎಂದು ಗುರುತಿಸಲಾಗಿದೆ. ಈತ ಹೆಂಡತಿ ಸೇರಿದಂತೆ ಇತರೆ ಮಹಿಳೆಯರನ್ನು ಆಮಿಷವೊಡ್ಡಿ, ದೌರ್ಜನ್ಯ ನಡೆಸಿ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಇಲಾಖೆಯ ನಿರ್ದೇಶಕ ಮೊಹಮದ್ ಐ. ಅಮೀನ್ ತಿಳಿಸಿದ್ದಾರೆ.

2022ರಿಂದ ಇದುವರೆಗೆ 42 ಮಹಿಳೆಯರನ್ನು ಹತ್ಯೆ ಮಾಡಿರುವುದಾಗಿ ಕಾಲಿನ್ಸ್ ಒಪ್ಪಿಕೊಂಡಿದ್ದಾನೆ. ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಮೃತಪಟ್ಟ ಮಹಿಳೆಯರು 18ರಿಂದ 30 ವರ್ಷದೊಳಗಿನವರಾಗಿದ್ದಾರೆ. ಈ ಸರಣಿ ಹತ್ಯೆ ಪ್ರಕರಣ ಕೀನ್ಯಾದ ಜನರನ್ನು ಬೆಚ್ಚಿಬೀಳಿಸಿತ್ತು.

RELATED ARTICLES

Related Articles

TRENDING ARTICLES