Sunday, September 8, 2024

ಬೆಳ್ಳಂ ಬೆಳಗ್ಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ದಂಡು: ವಾಹನ ದಟ್ಟಣೆ

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿ ಹಿಲ್ಸ್ ಜನರಿಂದ ಹೌಸ್ ಫುಲ್ ಆಗಿದೆ. ಪ್ರವಾಸಿಗರಿಂದ ನಂದಿಬೆಟ್ಟ ಕಿಕ್ಕಿರಿದು ತುಂಬಿದೆ. ಕರಾವಳಿ ಕಡೆ ಮಳೆ ಹಿನ್ನೆಲೆ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು ಲಗ್ಗೆ ಇಟ್ಟಿದೆ. ಸಾವಿರಾರು ಪ್ರವಾಸಿಗರು ಆಗಮಿಸಿದ ಹಿನ್ನೆಲೆ ನಂದಿಬೆಟ್ಟದಲ್ಲಿ ಜನಜಾತ್ರೆಯಾಗಿದೆ. ಇನ್ನು ಪ್ರವಾಸಿಗರನ್ನು ನಿಯಂತ್ರಿಸಲು ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಮನಮೋಹಕ ಸೂರ್ಯೋಧಯ ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಮಂಜಿನ ಮೋಡಗಳೊಂದಿಗೆ ಪ್ರವಾಸಿಗರು ಕುಣಿದು ಕುಪ್ಪಳಿಸುತ್ತಿದ್ದಾರೆ. ಕರಾವಳಿ ಕಡೆ ಮಳೆ ಆರ್ಭಟ ಹಲವು ಪ್ರವಾಸಿ ತಾಣಗಳಿಗೆ ನಿರ್ಭಂದ ಹಿನ್ನೆಲೆ ಸಾವಿರಾರು ಪ್ರವಾಸಿಗರು ಹರಿದು ನಂದಿಬೆಟ್ಟದಲ್ಲಿ ಲಗ್ಗೆ ಇಟ್ಟಿದ್ದು, ಟ್ರಾಫಿಕ್ ಜಾಮ್​ ಸಹ ಉಂಟಾಗಿದೆ.

ಮಂಜಾನೆ ಐದು ಗಂಟೆಯಿಂದ ಸಾಲು ಸಾಲು ವಾಹನಗಳು ರಸ್ತೆಯುದ್ದಕ್ಕೂ ನಿಂತುಕೊಂಡಿದ್ದು,
ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: SSLCಯಲ್ಲಿ ಫೇಲ್​ ಆಗಿದ್ದ ವಿದ್ಯಾರ್ಥಿಗಳಿಗೆ DSYP ಸ್ಪೆಷಲ್​ ಕ್ಲಾಸ್​: ಇದೀಗ 103 ವಿದ್ಯಾರ್ಥಿಗಳು ಪಾಸ್​

ಪ್ರವಾಸಿಗರ ಸ್ವರ್ಗ ನಂದಿ ಬೆಟ್ಟ:

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ ಸುಮಾರು 61 ಕಿ.ಮೀ ದೂರದಲ್ಲಿದೆ. ನಗರವಾಸಿಗಳು ಒತ್ತಡದ ಜಂಜಾಟದಿಂದ ಒಂದು ದಿನದ ಮಟ್ಟಿಗೆ ಆಹ್ಲಾದಕರವಾದ ನಂದಿ ದುರ್ಗಕ್ಕೆ ಭೇಟಿ ನೀಡುತ್ತಾರೆ. ನಂದಿ ಬೆಟ್ಟ ಟ್ರೆಕ್ಕಿಂಗ್‌ ಮಾಡಲು, ಸೈಕ್ಲಿಂಗ್‌ ಮಾಡುವಂತಹ ಸಾಹಸಿಗಳನ್ನು ಸ್ವಾಗತಿಸುತ್ತದೆ.

ಪ್ರಶಾಂತವಾದ ವಾತಾವರಣದಲ್ಲಿ ಕುಟುಂಬ ಸಮೇತ ಇಲ್ಲಿ ಆನಂದವಾಗಿ ಸಮಯ ಕಳೆಯಬಹುದು. ಅಷ್ಟೇ ಅಲ್ಲ, ನಂದಿ ಬೆಟ್ಟದಲ್ಲಿ ಕಣ್ಮನ ತಣಿಸುವ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ನೋಡಲು ಜನರು ಹಾತೊರೆಯುತ್ತಾರೆ. ಪ್ರಸ್ತುತ ನಂದಿ ದುರ್ಗದ ಪ್ರವೇಶ ಸಮಯದಲ್ಲಿ ಕೊಂಚ ಬದಲಾವಣೆಯಾಗಿದೆ. ಇದು ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ.

RELATED ARTICLES

Related Articles

TRENDING ARTICLES