Sunday, September 8, 2024

ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಗುಂಡಿನ ದಾಳಿ!

ಅಮೆರಿಕ: ಅಧ್ಯಕ್ಷೀಯ ಚುನಾವಣೆ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಗುಂಡೇಟಾಗಿದೆ. ಬಟ್ಲರ್ ನ ಪೆನ್ಸಿಲ್ವೇನಿಯಾದಲ್ಲಿ ಶನಿವಾರ ರ್ಯಾಲಿ ನಡೆಸುತ್ತಿದ್ದ ವೇಳೆ ಗುಂಡಿನ ದಾಳಿಯಾಗಿದ್ದು, ಟ್ರಂಪ್‌ ಹತ್ಯೆಯ ಯತ್ನ ನಡೆಸಲಾಗಿದೆ ಎನ್ನಲಾಗುತ್ತಿದೆ.

ವೇದಿಕೆಯಲ್ಲಿದ್ದ ಟ್ರಂಪ್ ಮೇಲೆ ಗುಂಡಿನ ದಾಳಿಯಾಗಿದ್ದು, ಮುಖ ಹಾಗೂ ಬಲಗಿವಿಯಲ್ಲಿ ರಕ್ತ ಕಾಣಿಸಿಕೊಂಡಿದೆ. ಘಟನೆ ನಡೆದ ಕೂಡಲೆ ಪ್ರತಿರೋಧ ವ್ಯಕ್ತಪಡಿಸಿದ ಟ್ರಂಪ್, ಕೈ ಎತ್ತಿ ಮುಷ್ಠಿ ಹಿಡಿದು ಸಾರ್ವಜನಿಕರತ್ತ ತಮ್ಮ ವಿರೋಧ ವ್ಯಕ್ತಪಡಿಸಿದರು. ಈ ಘಟನೆ ಅಮೆರಿಕದ ರಾಜಕೀಯ ನಾಯಕರನ್ನೂ ದಿಗ್ಭ್ರಾಂತಗೊಳಿಸಿದೆ.

ಇದನ್ನೂ ಓದಿ: ಭಾರೀ ಮಳೆ ಹಿನ್ನಲೆ: 5 ಜಿಲ್ಲೆಯಲ್ಲಿ ರೆಡ್​​ ಅಲರ್ಟ್​​​​​

ಗುಂಡಿನ ದಾಳಿಯಾದ ತಕ್ಷಣ ಪೋಡಿಯಂ ಬಳಿ ಇದ್ದ ರಕ್ಷಣಾ ಸಿಬ್ಬಂದಿ ರಿಪಬ್ಲಿಕನ್ ಕ್ಯಾಂಡಿಡೇಟ್ ಆಗಿರುವ ಟ್ರಂಪ್ ನ ಸುತ್ತುವರಿದು ವೇದಿಕೆಯಿಂದ ಹೊರಕರೆತರುವ ಪ್ರಯತ್ನ ಮಾಡಿದ್ದಾರೆ‌.

ನವೆಂಬರ್‌ ನಲ್ಲಿ ನಡೆಯಲಿರುವ ಅಮೇರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಬಿರುಸು ಪಡೆದಿತ್ತು. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಹಾಲಿ ಅಧ್ಯಕ್ಷ ಜೋ ಬೈಡನ್ ನಡುವೆ ತೀವ್ರ ಪೈಪೋಟಿಯೂ ಇದೆ. ಇಂತಹ ಸಂದರ್ಭದಲ್ಲಿ ಆಗಿರುವ ಟ್ರಂಪ್ ಮೇಲಿನ ಗುಂಡಿನ ದಾಳಿ ಅಮೆರಿಕ ದೇಶವನ್ನು ಬೆಚ್ಚಿ ಬೀಳಿಸಿದೆ.

RELATED ARTICLES

Related Articles

TRENDING ARTICLES