Sunday, September 8, 2024

ಪವರ್ ಟಿವಿಗೆ ‘ಸುಪ್ರೀಂ’ ಪವರ್!

ಪರವಾನಗಿ ನವೀಕರಿಸದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದ ಪವರ್ ಟಿ.ವಿ ಚಾನಲ್ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿದ್ದ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಸೂಕ್ತ ಪರವಾನಗಿ ಇಲ್ಲದೆ ಕನ್ನಡದ ಸುದ್ದಿ ವಾಹಿನಿಯಾದ ಪವರ್ ಟಿವಿ ಕಾರ್ಯ ನಿರ್ವಹಿಸುತ್ತಿತ್ತು ಅನ್ನೋ ಆರೋಪದ ಮೇಲೆ ಕರ್ನಾಟಕ ಹೈಕೋರ್ಟ್‌ ಪ್ರಸಾರ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚನೆ ನೀಡಿ ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು. ಇದೀಗ ಈ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

‘ರಾಜಕೀಯ ದ್ವೇಷ’ ಎಂದ ಮುಖ್ಯನ್ಯಾಯಾಧೀಶರು:

ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿದ್ದ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರಿದ್ದ ಪೀಠವು, ಈ ವಿಚಾರದ ಕುರಿತಾಗಿ ನಾವು ಇನ್ನೇನೂ ಕೇಳಲು ಬಯಸೋದಿಲ್ಲ. ಇದು ರಾಜಕೀಯ ದ್ವೇಷದ ಕ್ರಮ ಅನ್ನೋದು ಸ್ಪಷ್ಟವಾಗುತ್ತಿದೆ ಎಂದಿದ್ದಾರೆ. ಅವರ ದನಿಯನ್ನು ಸಂಪೂರ್ಣವಾಗಿ ಕುಗ್ಗಿಸುವ ಉದ್ದೇಶವಾಗಿತ್ತು. ಹೀಗಾಗಿ ವಾಹಿನಿ ಪ್ರಸಾರಕ್ಕೆ ತಡೆ ಹಿಡಿಯಲಾಗಿತ್ತು. ಆದರೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡೋದು ಸರ್ಕಾರಗಳ ಕರ್ತವ್ಯ ಎಂದು ಮುಖ್ಯ ನ್ಯಾಯಮೂರ್ತಿಗಳು ಚಾಟಿ ಬೀಸಿದ್ದಾರೆ.

ಇದನ್ನೂ ಓದಿ: ಸತ್ಯಮೇವ ಜಯತೇ : ಪವರ್​ ಟಿವಿ ಪ್ರಸಾರಕ್ಕೆ ಸುಪ್ರೀಂಕೋರ್ಟ್​​​ ಗ್ರೀನ್​ಸಿಗ್ನಲ್​

‘ಪವರ್​ ಟಿವಿ ಹತ್ತಿಕ್ಕುವ ಕೆಲಸ ವಿಫಲ: ಎಂ.ಡಿ ರಾಕೇಶ್​ ಶೆಟ್ಟಿ:

ಇನ್ನು ಪವರ್​ ಟಿವಿ ಮರು ಪ್ರಸಾರದ ಕುರಿತು ಪವರ್​ ಟಿವಿಯ ಮುಖ್ಯಸ್ಥರಾದ ರಾಕೇಶ್​ ಶೆಟ್ಟಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಪವರ್​ ಟಿವಿ ಪುಟ್ಟ ಕೂಸು.. ಜನರ ಪರ ಧ್ವನಿಯಾಗಿದ್ದ ಪವರ್​ ಟಿವಿಯ ಧ್ವನಿ ಅಡಗಿಸಲು ಅನೇಕರು ಪ್ರಯತ್ನಪಟ್ಟಿದ್ದು, ಸುಪ್ರೀಕೋರ್ಟ್​ನಲ್ಲಿ ನ್ಯಾಯಾ ಸಿಕ್ಕಿದೆ ಎಂದು ಪವರ್ ಟಿವಿ ಮುಖ್ಯಸ್ಥರಾದ ರಾಕೇಶ್​ ಶೆಟ್ಟ ಅವರು ತಿಳಿಸಿದ್ದಾರೆ. ಪೊಲಿಟಿಕಲ್​​ ಪವರ್​​​ ಬಳಸಿ ಪವರ್​ ಟಿವಿ ಹತ್ತಿಕ್ಕುವ ಕೆಲಸ ಮಾಡಿದ್ರು. ಆದ್ರೆ ಸುಪ್ರೀಕೋರ್ಟ್​​ನ ಮುಖ್ಯ ನ್ಯಾಯಧೀಶರಾದ ಚಂದ್ರಚೂಡ್​ ಹಾಗೂ ಇತರ ನ್ಯಾಯಾಧೀಶರಾದ ಜೆ.ಬಿ.ಪಾದ್ರೀವಾಲ, ಮನೋಜ್​ ಮಿಶ್ರ ವಾದ ಆಲಿಸಿದ್ರು. ಪವರ್​ ಟಿವಿಗೆ ಪ್ರಸಾರಕ್ಕೆ ತಡೆ ನೀಡಿದ ಹೈಕೋರ್ಟ್​​​ ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿದ್ರು ಎಂದು ತಿಳಿಸಿದರು.

ಪವರ್​ ಟಿವಿಗೆ ಎರಡನೇ ಭಾರಿ ಜಯ:

ಸಮಾಜದಲ್ಲಿನ ಸತ್ಯಗಳನ್ನು ನಿಸ್ಪಕ್ಷಪಾತವಾಗಿ, ಇದ್ದದ್ದನ್ನು ಇದ್ದಂಗೆ ಹೇಳುತ್ತಿದ್ದ ಪವರ್​ ಟಿವಿಗೆ ಷಡ್ಯಂತರಗಳನ್ನು ಮಾಡುವ ಮೂಲಕ ಒಟ್ಟು ಎರಡು ಬಾರಿ ಸುದ್ದಿಪ್ರಸಾರಕ್ಕೆ ತಡೆಯೊಡ್ಡಿದ್ದರು, ಎರಡೂ ಬಾರಿಯೂ ಸತ್ಯಕ್ಕೆ ಜಯ ಸಿಕ್ಕಿದೆ. ಮೊದಲ ಬಾರಿ ಮರು ಪ್ರಸಾರದವಾದಗಲೂ ಮತ್ತಷ್ಟು ಉತ್ಸಾಹದೊಂದಿಗೆ ಜನರ ಮುಂದೆ ಬಂದ ಪವರ್​ ಟಿವಿ, ಇದೀಗ ಎರಡನೇ ಬಾರಿಗೆ ರಾಜಕೀಯ ಷಡ್ಯಂತರಗಳನ್ನು ಎದುರಿಸಿ ಸುಪ್ರಿಂ ಪವರ್​ನೊಂದಿಗೆ ಜನರ ಮುಂದೆ ಬಂದಿದೆ.

RELATED ARTICLES

Related Articles

TRENDING ARTICLES