Sunday, September 8, 2024

40 ದಿನದಲ್ಲಿ 7ಬಾರಿ ಹಾವು ಕಚ್ಚಿದರೂ ಬದುಕುಳಿದ ಯುವಕ: ಇದೊಂದು ಪವಾಡ ಎಂದ ವೈದ್ಯರು

ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಯುವಕನೊಬ್ಬನಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ಬಾರಿ ಹಾವು ಕಚ್ಚಿರುವ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಘಟನೆ ಬಗ್ಗೆ ಯುವಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಜಿಲ್ಲೆಯ ಸೌರಾ ಗ್ರಾಮದ ನಿವಾಸಿಯಾಗಿರುವ ವಿಕಾಸ್ ದುಬೆ ಎಂಬ ಯುವಕನೇ ಹಾವಿನ ದಾಳಿಗೆ ಒಳಗಾಗಿ ಬದುಕುಳಿದ ಯುವಕ, ಇದೀಗ ಏಳನೇ ಬಾರಿ ಹಾವಿನ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವಿನ ದವಡೆಯಿಂದ ಪಾರಾಗಿದ್ದಾನೆ ಎಂದು ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದರೆ.

ವಿಕಾಸ್ ದುಬೆಗೆ ಜೂನ್ 2ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಹವಿ ಕಚ್ಚಿದೆ ವಿಚಾರ ಗೊತ್ತಾಗುತಿದಂತೆ ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಗುಣಮುಖನಾಗಿ ಎರಡು ದಿನದಲ್ಲಿ ಮನೆಗೆ ಬಂದಿದ್ದ, ಇದಾದ ಬಳಿಕ ಜೂನ್ 10ರಂದು ಮತ್ತೆ ಎರಡನೇ ಬಾರಿ ಹಾವು ಕಚ್ಚಿದೆ ಈ ವೇಳೆಯೂ ಅದೇ ಆಸ್ಪತ್ರೆಗೆ ತೆರಳಿ ಅದೇ ವೈದ್ಯರ ಬಳಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದಾನೆ, ಆದರೆ ಈ ವೇಳೆ ಆತನಿಗೆ ಹಾವಿನ ಬಗ್ಗೆ ಭಯ ಹುಟ್ಟಿದೆ ಸತತ ಎರಡು ಬಾರಿ ಹಾವು ಕಚ್ಚಿದ್ದರಿಂದ ಭಯಗೊಂಡ ವಿಕಾಸ್ ರಾತ್ರಿ ಮಲಗಲೂ ಹೆದರುತ್ತಿದ್ದನಂತೆ ಹೀಗೆ ಏಳು ದಿನಗಳು ಬಿಟ್ಟು ಜೂನ್ 17ರಂದು ಮತ್ತೆ ಹಾವಿನ ದಾಳಿಗೆ ಒಳಗಾಗಿದ್ದಾನೆ ಅಲ್ಲದೆ ಈ ವೇಳೆ ಆತ ಗಾಬರಿಗೊಂಡಿದ್ದರಿಂದ ಮೂರ್ಛ ಕೂಡ ಹೋಗಿದ್ದ ಎನ್ನಲಾಗಿದೆ ಆದರೂ ಹಿಂದೆ ಚಿಕಿತ್ಸೆ ನೀಡಿದ ವೈದ್ಯರೇ ಚಿಕಿತ್ಸೆ ನೀಡಿ ಗುಣಮುಖನಾಗಿ ಮನೆಗೆ ಬಂದಿದ್ದಾನೆ.

ಇದನ್ನೂ ಓದಿ: ಕೆಪಿಸಿಸಿ ಕಚೇರಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರರಿಗೆ ಮನೆ ಭಾಗ್ಯ!

ಇದಾಗಿ ಕೆಲ ದಿನಗಳು ಬಿಟ್ಟು ನಾಲ್ಕನೇ ಬರಿ ಹಾವಿನ ಕಡಿತಕ್ಕೆ ಒಳಗಾಗಿದ್ದಾನೆ ಮನೆಯವರು ಮತ್ತೆ ಆತನನ್ನು ಅದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಇದನ್ನು ಕಂಡ ವೈದ್ಯರು ಕೂಡ ಬೆಚ್ಚಿ ಬಿದ್ದಿದ್ದಾರೆ ಅಲ್ಲದೆ ದುಬೆಗೆ ಒಂದು ಸಲಹೆಯನ್ನು ನೀಡಿದ್ದಾರೆ, ಸ್ವಲ್ಪ ಸಮಯ ಊರು ಬಿಟ್ಟು ಬೇರೆ ಕಡೆ ಇರುವಂತೆ ಸಲಹೆ ನೀಡಿದ್ದಾರೆ. ಅದರಂತೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ದುಬೆ ತನ್ನ ಮನೆ ಬಿಟ್ಟು ಫತೇಹ್ ಪುರ್ ನ ರಾಧಾ ನಗರದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಇರಲು ನಿರ್ಧರಿಸಿ ಅಲ್ಲಿಗೆ ತೆರಳಿದ್ದಾನೆ ಆದರೆ ಆತನ ದುರದೃಷ್ಟ ಅಲ್ಲಿಯೂ ಹಾವಿನ ದಾಳಿಗೆ ಒಳಗಾಗಿದ್ದಾನೆ ಮತ್ತೆ ಪೋಷಕರು ಆತನನ್ನು ತನ್ನ ಊರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಇದನ್ನು ಕಂಡ ವೈದ್ಯರೂ ಇದೊಂದು ಪವಾಡವೇ ಸರಿ ಎಂದು ಹೇಳಿದ್ದಾರೆ.

ಇನ್ನು ಚಿಕ್ಕಮ್ಮನ ಮನೆಯಲ್ಲೂ ನನಗೆ ರಕ್ಷಣೆ ಇಲ್ಲ ಎಂದು ತಿಳಿದ ದುಬೆ ಹೆತ್ತವರೊಂದಿಗೆ ತನ್ನ ಊರಲ್ಲೇ ಇರಲು ನಿರ್ಧರಿಸಿದ ಆದರೆ ಹಾವಿಗೆ ದುಬೆ ಮೇಲೆ ಅದೇನು ದ್ವೇಷನೋ ಗೊತ್ತಿಲ್ಲ ಆರನೇ ಬಾರಿ ಕಚ್ಚಿದೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿ ಕೆಲ ದಿನ ಆಸ್ಪತ್ರೆಯಲ್ಲೇ ಇದ್ದು ವಾಪಸ್ಸಾಗಿದ್ದಾನೆ, ಒಂದೆಡೆ ಹಾವಿನ ಭಯ ಮತ್ತೊಂದೆಡೆ ಕನಸಿನಲ್ಲೂ ಹಾವು ಬಂದು ಕಚ್ಚುವ ಕನಸು, ಜೀವಭಯದಲ್ಲೇ ರಾತ್ರಿ ಕಳೆಯುತಿದ್ದ ದುಬೆಗೆ ಇದೀಗ ಏಳನೇ ಬಾರಿ ಹಾವು ಕಚ್ಚಿದೆಯಂತೆ ಮತ್ತೆ ಆಸ್ಪತ್ರೆಗೆ ದಾಖಲಾಗಿರುವ ದುಬೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸದ್ಯ ಅಪಾಯದಿಂದ ಪಾರಾಗಿದ್ದಾನೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಜವಾಹರಲಾಲ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES